ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಮುಖಂಡ ಎನ್.ಯು. ನಾಚಪ್ಪ, ಕಳೆದ 36 ವರ್ಷಗಳಿಂದ ಸಿಎನ್‌ಸಿ ಸಂಘಟನೆ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ. ಸ್ವರಾಜ್ಯ, ಸ್ವಯಂ ನಿರ್ಣಯದ ಹಕ್ಕುಗಳು, ಎಸ್‌ಟಿ ವರ್ಗೀಕರಣ ಮತ್ತು ಕೊಡವರಿಗೆ ವಿಶ್ವಸಂಸ್ಥೆಯ ಆದಿಮಸಂಜಾತ ಬುಡಕಟ್ಟು ಮಾನ್ಯತೆಗಾಗಿ ಸತತವಾಗಿ ಮತ್ತು ಶಾಂತಿಯುತವಾಗಿ ಹೋರಾಡಲಾಗುತ್ತಿದೆ. ಆರಂಭದಿAದಲೂ ಪ್ರತಿ ವರ್ಷ ಅಂತರರಾಷ್ಟಿçÃಯ ಮಾತೃಭಾಷಾ ದಿನದಂದು ತನ್ನ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪುನಶ್ಚೇತನಗೊಳಿಸಲು ಮತ್ತು ನೋಂದಾಯಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಅಲ್ಲದೆ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸುತ್ತಿದೆ ಎಂದರು.