ಅಖಿಲ ಕೊಡವ ಸಮಾಜ ಕೇಂದ್ರ ಸಮಿತಿ ರಚನೆ

kodavas
kodavas
Published on
ವಿರಾಜಪೇಟೆ : ಅಖಿಲ ಕೊಡವ ಸಮಾಜದ ಕೇಂದ್ರೀಯ ಸಮಿತಿಗೆ ವಿರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಶೇಷ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ದೇಶತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ 43 ಜನರಿಗೆ ಕೊಡವ ಸಮಾಜದ ಹೊಣೆಗಾರಿಕೆ ನೀಡಲಾಯಿತು. ದೇಶತಕ್ಕರ ಸ್ಥಾನ, ನಾಡ್ ತಕ್ಕರ ಜವಾಬ್ದಾರಿ ನಿಭಾಯಿಸುವ ಹೊಣೆ, ಕೊಡವ ಸಮಾಜಗಳ ಆಯ್ಕೆ, ಕಾನೂನು ಸಲಹೆಗಾರರ ನೇಮಕ, ಕೊಡವ ವಕ್ಕದ ಜವಾಬ್ದಾರಿಗೆ ನೀಡಲಾಯಿತು.
ದೇಶತಕ್ಕರ ಪರವಾಗಿ ಪರದಂಡ ಸುಬ್ರಮಣಿ ಕಾವೇರಪ್ಪ(ಅಖಿಲ ಕೊಡವ ಸಮಾಜ ಅಧ್ಯಕ್ಷ), ಮತ್ತು ಪೋರೆರ ಬಿದ್ದಪ್ಪ, ನಾಡ್ ತಕ್ಕರಾಗಿ ಕಲ್ಯಾಟಂಡ ಮುತ್ತಪ್ಪ (ನಾಲ್ ನಾಡ್), ಕೇಲೇಟಿರ ರಂಜನ್ (ನೂರಂಬಡ ನಾಡ್), ಕಾಯಪಂಡ ಸುನಿಲ್ (ಮರೆನಾಡ್), ತಾತಪಂಡ ನಯನ (ನೆಲ್ಲಿಪುದಿಕೇರಿ ನಾಡ್), ಚೆಕ್ಕೇರ ರಾಜೇಶ (ಅಂಜಿಕೇರಿ ನಾಡ್), ಅಜ್ಜಮಾಡ ಚಂಗಪ್ಪ (ಕುರ್ಚಿತೊರೆ ನಾಡ್), ಮೇದುರ ಗಪ್ಪು ಪೂವಯ್ಯ (ಸೂರ್ಲಬ್ಬಿ ನಾಡ್ ), ಐಚೇಟ್ಟಿರ ಕುಟ್ಟಯ್ಯ (ಬೆಪ್ಪು ನಾಡ್), ಅಡ್ಡಟಡ ಪ್ರಕಾಶ ಕುಶಾಲಪ್ಪ (ಬೊಟ್ಟಿಯಾತ್ ನಾಡ್ ) ಅವರನ್ನು ಆಯ್ಕೆ ಮಾಡಲಾಯಿತು.
ಕೊಡವ ಸಮಾಜ ಪರವಾಗಿ ವಿರಾಜಪೇಟೆ ಕೊಡವ ಸಮಾಜ, ಮೂರ್ನಾಡ್, ನಾಪೋಕ್ಲು, ಮಕ್ಕಂದೂರ್, ಕುಶಾಲನಗರ, ಪೊನ್ನಂಪೇಟೆ, ಟಿ. ಶೆಟ್ಟಿಗೇರಿ ಅಮ್ಮತ್ತಿ, ಗೋಣಿಕೊಪ್ಪ, ಬೆಪ್ಪುನಾಡ್ ಕೊಡವ ಸಮಾಜ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಕೊಡವ ವಕ್ಕದಿಂದ ಪ್ರತಿನಿಧಿಗಳಾಗಿ ಅನ್ನಡಿಯಂಡ ದಿಲೀಪ ಕುಮಾರ್, ಉಮೇಶ ಅಪ್ಪಣ್ಣ, ಚೊಟ್ಟಂಡ ಪ್ರಭು ಸೋಮಯ್ಯ, ಚೆಟ್ಟೋಳೀರ ಗಿರೀಶ ಅಪ್ಪಯ್ಯ, ಪಟ್ಟಡ ಪೂವಣ್ಣ, ಮಂಡೇಪಂಡ ರತನ್, ಕುಟ್ಟಯ್ಯ, ಪೃಥ್ವಿ ಚೀರಂಡ ಕಂದಾ ಸುಬ್ಬಯ್ಯ, ಕಾಣತಂಡ ಜಗದೀಶ, ಸರಸ್ವತಿ, ಸಾವಿತ್ರಿ, ಕುಲ್ಲಚಂಡ ಬೋಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net