ಮೈಸೂರು ವಿಭಾಗ ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿದ ಕೊಡಗು ತಂಡಕ್ಕೆ ಫಾತಿಮಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನ ಬಹುಮಾನ ವಿತರಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಸಂತೋಷ್, ಶರತ್ ಮತ್ತಿತರರು ಇದ್ದರು.
ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮವಾರಪೇಟೆ ಹಾಗೂ ಕುಶಾಲನಗರದ ಫಾತಿಮಾ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕುಶಾಲನಗರದಲ್ಲಿ ಈಚೆಗೆ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಕೊಡಗು ತಂಡ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಇಲ್ಲಿನ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಮತ್ತು ಉಡುಪಿ ತಂಡಗಳ ನಡುವೆ ನಡೆದ ತೀವ್ರ ಹಣಾಹಣಿಯ ಪಂದ್ಯಾವಳಿಯಲ್ಲಿ ಕೊಡಗು ತಂಡ ಚಾಣಾಕ್ಷತನದ ಆಟ ಪ್ರದೇಶಿಸಿ ಜಯಗಳಿಸಿತು. ಉಡುಪಿ ತಂಡ ದ್ವಿತೀಯ ಸ್ಥಾನಗಳಿಸಿತು. 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಪ್ರಥಮ ಹಾಗೂ ಮೈಸೂರು ತಂಡ ದ್ವಿತೀಯ ಸ್ಥಾನಗಳಿಸಿದೆ.
14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಗಳಿಸಿದೆ.
ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ಪ್ರಥಮ ಹಾಗೂ ಕೊಡಗು ದ್ವಿತೀಯ ಸ್ಥಾನಗಳಿಸಿದೆ.
ವಿಜೇತ ತಂಡಗಳಿಗೆ ಫಾತಿಮಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿವಯ್ಯ ಎಸ್.ಪಲ್ಲೇದ್ ಟ್ರೋಫಿ, ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಫಾತಿಮಾ ಕಾನ್ವೆಂಟ್ ವ್ಯವಸ್ಥಾಪಕಿ ಸಿಸ್ಟರ್ ಆಗ್ನೆಸ್, ಸಂಚಾಲಕಿ ಸಿಸ್ಟರ್ ಫ್ಲಾರೇಟ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ರತ್ನಕುಮಾರ್, ಉದ್ಯಮಿ ಗೌತಮ್, ವಕೀಲ ಶರತ್, ಕ್ರೀಡಾಕೂಟದ ಸಂಚಾಲಕ ಸಂತೋಷ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸುಜಾತ,
ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್, ಬೋಜೇಗೌಡ, ಪ್ರತಾಪ್, ದೊಡ್ಡಯ್ಯ, ನಂದಿನಿ, ಆಶಾ, ಕುಸುಮ ಇದ್ದರು.
ಇದೇ ಸಂದರ್ಭ ಕ್ರೀಡಾಕೂಟ ನಡೆಯಲು ಉಚಿತವಾಗಿ ಒಳಾಂಗಣ ಕ್ರೀಡಾಂಗಣ ಒದಗಿಸಿದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಣಗಣ ವ್ಯವಸ್ಥಾಪಕ ಶರತ್, ಕ್ರೀಡಾಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಫಾತಿಮಾ ಶಾಲೆಯ ಸಿಸ್ಟರ್ ಚೇತನ, ಸಿಸ್ಟರ್ ಆಗ್ನೇಸ್ ಅವರನ್ನು ಸನ್ಮಾನಿಸಲಾಯಿತು.