ಪ್ರವಾಸಿಗರಿಗೆ ಕೊಡಗು ಸುರಕ್ಷಿತವಾಗಿದ್ದು ಆತಿಥ್ಯಕ್ಕೆ ಎಂದಿನAತೆ ಹೆಸರುವಾಸಿಯಾಗಿದೆ ಎಂದು ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೊಳAಡ ದಿನೇಶ್ ಕಾರ್ಯಪ್ಪ ಹೇಳಿದರು. ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ನಗರದ ವ್ಯಾಲಿವ್ಯೂ ಹೋಟೇಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರವಾಸೋದ್ಯಮ ಸಂಬAಧಿತ ವಿವಿಧ ಸಂಘ ಸಂಸ್ಥೆಗಳೊAದಿಗಿನ ಸಭೆಯಲ್ಲಿ ಮಾತನಾಡಿದರು. ಕೆಲವರು ಅನಗತ್ಯವಾಗಿ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ಇಲ್ಲ ಸಲ್ಲದ ಟೀಕೆ, ದೂರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿಸುತ್ತಾ ಕೊಡಗಿನ ಆತಿಥ್ಯ ಸಂಸ್ಕೃತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಆಧಾರ ರಹಿತ ಹೇಳಿಕೆಗಳನ್ನು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡ ಸರ್ವರೂ ಖಂಡಿಸಲೇಬೇಕಾಗಿದೆ. ಕಳೆದ ವರ್ಷ ಕೊಡಗಿಗೆ 25 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದರಾದರೂ 45 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಉಪನಿರ್ದೇಶಕರನ್ನು ನಿಯೋಜಿಸುವ ನಿಟ್ಟಿನಲ್ಲಿ ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಪ್ರಯತ್ನಿಸಲಿದೆ.