ಕೊಡಗಿಯನ್ ಫುಟ್ಬಾಲ್ ಟೂರ್ನಮೆಂಟ್ 2026ರ ಸಮಾರೋಪ

ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗಿಯನ್ ಫುಟ್ಬಾಲ್ ಟೂರ್ನಮೆಂಟ್ 2026ರ ಪಂದ್ಯಾವಳಿಯೊAದರ ದೃಶ್ಯ
ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗಿಯನ್ ಫುಟ್ಬಾಲ್ ಟೂರ್ನಮೆಂಟ್ 2026ರ ಪಂದ್ಯಾವಳಿಯೊAದರ ದೃಶ್ಯ
Published on
ಕುಶಾಲನಗರ:
ಸಮೀಪದ ಕೂಡಿಗೆಯಲ್ಲಿ ಇರುವ ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗಿಯನ್ ಫುಟ್ಬಾಲ್ ಟೂರ್ನಮೆಂಟ್ 2026ರ ಸಮಾರೋಪ ಸಮಾರಂಭ ಈಚೆಗೆ ನಡೆಯಿತು. ಈ ಪಂದ್ಯಾವಳಿಯಲ್ಲಿ ಕೊಡಗು ಸೈನಿಕ ಶಾಲೆ, (ಜೂನಿಯರ್ ಮತ್ತು ಸಬ್-ಜೂನಿಯರ್ ವಿಭಾಗ), ಬೆಂಗಳೂರಿನ ವಾಯುಪಡೆ ಶಾಲೆ, ಜಾಲಹಳ್ಳಿ, ವಾಯುಪಡೆ ಶಾಲೆ ಹೆಬ್ಬಾಳ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆ ತಂಡಗಳು ಭಾಗವಹಿಸಿದ್ದವು.
ಉದಯೋನ್ಮುಖ ಫುಟ್ಬಾಲ್ ಆಟಗಾರರಿಗೆ ತಮ್ಮ ಕೌಶಲ್ಯ, ಸಾಂಘಿಕ ಹೋರಾಟ ಮತ್ತು ಶಿಸ್ತನ್ನು ಪ್ರದರ್ಶಿಸಲು ಈ ಕ್ರೀಡಾ ಕೂಟವು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಕ್ರೀಡಾಕೂಟದ ಆರಂಭದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ ಕ್ರೀಡಾ ಮನೋಭಾವ ಮತ್ತು ಪ್ರಾಮಾಣಿಕ ಆಟದ ಮೌಲ್ಯಗಳನ್ನು ಎತ್ತಿಹಿಡಿಯಲು ಕರೆ ನೀಡಿದರು.
ಈ ಕ್ರೀಡಾಕೂಟದಲ್ಲಿ ಹಲವಾರು ರೋಚಕ ಪಂದ್ಯಗಳ ನಂತರ ಕೊಡಗು ಸೈನಿಕ ಶಾಲೆ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವಾಯುಪಡೆ ಶಾಲೆ ಹೆಬ್ಬಾಳ ತಂಡವು ರನ್ನರ್-ಅಪ್ ಸ್ಥಾನ ಪಡೆದುಕೊಂಡಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಸೈನಿಕ ಶಾಲೆ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ವಿಜೇತರಿಗೆ ಬಹುಮಾನ ವಿತರಿಸಿದರು.
ವಿಜೇತ ತಂಡಕ್ಕೆ ಪಾರಿತೋಷಕ, ಚಿನ್ನದ ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ರನ್ನರ್-ಅಪ್ ತಂಡಕ್ಕೆ ಪಾರಿತೋಷಕ ಹಾಗೂ ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ಕೊಡಗು ಸೈನಿಕ ಶಾಲೆಯ ಪ್ರಜ್ವಲ್ ಎಸ್. ಅತ್ಯುತ್ತಮ ಆಟಗಾರ ಮತ್ತು ಉತ್ತಮ ಗೋಲ್ ಕೀಪರ್ ಆಗಿ ಆರ್ಯ ಚಿರಾಯ್ ಗೌಡರನ್ನು ಗುರುತಿಸಿ ಗೌರವಿಸಲಾಯಿತು.
ಶಾಲೆಯ ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಿಬ್ಬಂದಿ, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net