

ಪ್ರಮುಖ ಮುಖ್ಯಾಂಶಗಳು
ಕೊಡಗಿನಂಥ ಹೆಚ್ಚು ಚಳಿ ಇರುವ ಪ್ರದೇಶದಲ್ಲಿ ಚಳಿಗಾಲದ ಸಂದರ್ಭ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ ಕಡಿಮೆ ತೋರಿಸುವುದು ಸಹಜ.. ಬೇಸಿಗೆಯಲ್ಲಿ ವಾತಾವರಣದಲ್ಲಿ ಧೂಳಿನ ಕಣಗಳು ಹೆಚ್ಚು ಇರುವ ಸಂದರ್ಭ ಎಕ್ಯೂಐ ಹೆಚ್ಚಾಗುತ್ತದೆ. ವಿಲೋಮ ಪರಿಣಾಮದಿಂದ ಹೀಗಾಗುತ್ತದೆ. ಮಳೆ, ಮಂಜು ಕೂಡ ಎಕ್ಯೂಐ ಬದಲಾವಣೆ ಮೇಲೆ ಪರಿಣಾಮ ಬೀರುತ್ತದೆ. ಮಾಲಿನ್ಯ ಸೂಸುವ ದೊಡ್ಡ ಪ್ರಮಾಣದ ಕೈಗಾರಿಕೆಗಳು ಜಿಲ್ಲೆಯಲ್ಲಿ ಇಲ್ಲ. ಹಾಗಾಗಿ ಇಲ್ಲಿನ ಎಕ್ಯೂಐ ಮೇಲೆ ಮಾಲಿನ್ಯದ ಹೊಡೆತ ಆಗುವುದಿಲ್ಲ.
ಸುಂದರ ಪ್ರಕೃತಿ ಸಿರಿಯ ಮಡಿಕೇರಿಯ ಗಾಳಿ ಪರಿಶುದ್ಧವಾಗಿದೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕಳೆದ ವರ್ಷ ನಂಬರ್ 1 ಸ್ಥಾನದಲ್ಲಿ ಇದ್ದ ಮಡಿಕೇರಿ ಈ ವರ್ಷ 3ನೇ ಸ್ಥಾನಕ್ಕೆ ಇಳಿದಿರುವುದು ಸ್ವಲ್ಪ ಬೇಸರದ ವಿಷಯ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಈ ಮೂಲಕ ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಕಾಪಾಡಿಕೊಂಡು ಬರೋಣ. ಅರಣ್ಯ ನಾಶ ಮಾಡದೇ ಉಳಿಸಿ ಬೆಳೆಸೋಣ. ಗಾಳಿಯೊಂದಿಗೆ ನೆಲ, ಜಲವನ್ನೂ ಕಾಪಾಡಿಕೊಳ್ಳುವ ಸಂಕಲ್ಪ ನಮ್ಮದಾಗಲಿ