ಕೊಡಗು ಕಲಾವಿದರ ಸಂಘದ ಸಭೆ

ವಿರಾಜಪೇಟೆಯಲ್ಲಿ ನಡೆದ ಕೊಡಗು ಕಲಾವಿದರ ಸಂಘದ ಸಭೆಯಲ್ಲಿ ಜಿಲ್ಲೆಯ ಕಲಾವಿದರು ಪಾಲ್ಗೊಂಡಿದ್ದರು. ಕೊಟ್ಟುಕತ್ತಿರ ಪ್ರಕಾಶ್, ನೆರವಂಡ ಉಮೇಶ್, ಈರಮಂಡ ಹರಿಣಿ ವಿಜಯ್, ಮಲ್ಲಮಾಡ ಶಾಮಲಾ ಸುನಿಲ್, ಚಿರುವಾಳಂಡ ಸುಜಲ ನಾಣಯ್ಯ, ಟಿ.ಆರ್. ಪ್ರಭುದೇವ್ ಮತ್ತಿತರರು ಇದ್ದರು.
ವಿರಾಜಪೇಟೆಯಲ್ಲಿ ನಡೆದ ಕೊಡಗು ಕಲಾವಿದರ ಸಂಘದ ಸಭೆಯಲ್ಲಿ ಜಿಲ್ಲೆಯ ಕಲಾವಿದರು ಪಾಲ್ಗೊಂಡಿದ್ದರು. ಕೊಟ್ಟುಕತ್ತಿರ ಪ್ರಕಾಶ್, ನೆರವಂಡ ಉಮೇಶ್, ಈರಮಂಡ ಹರಿಣಿ ವಿಜಯ್, ಮಲ್ಲಮಾಡ ಶಾಮಲಾ ಸುನಿಲ್, ಚಿರುವಾಳಂಡ ಸುಜಲ ನಾಣಯ್ಯ, ಟಿ.ಆರ್. ಪ್ರಭುದೇವ್ ಮತ್ತಿತರರು ಇದ್ದರು.
Published on
ವಿರಾಜಪೇಟೆ:
ಕೊಡಗು ಕಲಾವಿದರ ಸಂಘದ ಸಭೆ ಸಂಘದ ಜಿಲ್ಲಾಧ್ಯಕ್ಷರಾದ ಕೊಟ್ಟುಕತ್ತಿರ ಪ್ರಕಾಶ್ ಅಧ್ಯಕ್ಷತೆಯಲ್ಲಿ ವಿರಾಜಪೇಟೆ ಖಾಸಗಿ ಸಭಾಂಗಣವೊAದರಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಪ್ರಕಾಶ್ ಕೊಡಗು ಕಲಾವಿದರ ಸಂಘ ನೋಂದಣಿ ಆಗಿ ಐದು ವರ್ಷಗಳು ತುಂಬಿದೆ. ಸಂಘ ನೋಂದಣಿಯಾದ ಆರಂಭದ ದಿನಗಳಲ್ಲಿ ಸಹಕಾರದ ಕೊರತೆಯಿಂದ ಯಾವುದೇ ರೀತಿಯ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿರಿಯ ಕಲಾವಿದÀ ನೆರವಂಡ ಉಮೇಶ್ ಪ್ರೋತ್ಸಾಹ ಮತ್ತು ಸ್ಥಳೀಯ ಕಲಾವಿದರ ಸಹಕಾರದಿಂದ ನಾಲ್ಕು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ಸಂಘ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವ ಕಾರಣ ಸಮಿತಿಯನ್ನು ಪುನರ್ ರಚನೆ ಮಾಡಬೇಕಿದೆ ಹಾಗೂ ಸಂಘದ ಸದಸ್ಯತ್ವ ಆಂದೋಲನ ಮಾಡುವ ಮೂಲಕ ಕೊಡಗಿನ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸುವ ಪ್ರಯತ್ನ ಆಗಬೇಕು ಎಂದರು.
ಹಿರಿಯ ಕಲಾವಿದ ನೆರವಂಡ ಉಮೇಶ್ ಮಾತನಾಡಿ ಕೊಡಗಿನ ಎಲ್ಲಾ ಕಲಾವಿದರು ಸೇರಿಕೊಂಡು ಕಲಾವಿದರ ಸಂಘವನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ನಮ್ಮ ಸ್ಥಳೀಯ ಕಲಾವಿದರ ಪ್ರತಿಭೆಗೆ ಉತ್ತಮವಾದ ಅವಕಾಶವನ್ನು ನೀಡಬೇಕಿದೆ ಎಂದು ಹೇಳಿದರು. ಸಭೆಯಲ್ಲಿ ಸಂಘದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.
ಸಂಘದ ಪ್ರಧಾನ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್, ಮಲ್ಲಮಾಡ ಶಾಮಲಾ ಸುನಿಲ್, ಚಿರುವಾಳಂಡ ಸುಜಲ ನಾಣಯ್ಯ, ಟಿ.ಆರ್. ಪ್ರಭುದೇವ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net