ಕೂಡಿಗೆ ರಸ್ತೆಯ ಸೋಮೇಶ್ವರ ದೇವಾಲಯದ ಎದುರಿನ ಖಾಲಿ ಜಾಗದಲ್ಲಿ ರಾತ್ರಿ 7.30ರಲ್ಲಿ ಬೆಂಕಿ ಕಾಣಿಕೊಂಡು ಬೆಂಕಿ ಜ್ವಾಲೆ ತೀವ್ರಗೊಂಡಿತ್ತು. ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಮನೆಗಳಿದ್ದು, ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಫೈಯರ್‌ಮನ್ ಪ್ರೇಮಾನಂದ್ ಮತ್ತು ಸಿಬ್ಬಂದಿ ಬೆಂಕಿ ನಂದಿಸಿ, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸಿದರು. ಅಗ್ನಿಶಾಮಕ ಸಿಬ್ಬಂದಿ ತುರ್ತು ಸ್ಪಂದನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.