ಶ್ರೀಬೆಟ್ಟಚಿಕ್ಕಮ್ಮ ದೇವಿ ದೇಗುಲದಲ್ಲಿ ವಾರ್ಷಿಕೋತ್ಸವ

ಪೊನ್ನಂಪೇಟೆ ಸಮೀಪದ ಹರಿಹರ ಬೆಟ್ಟ ಚಿಕ್ಕಮ್ಮ ದೇವಸ್ಥಾನದ ಮಹಾದ್ವಾರವನ್ನು ಗಣ್ಯರು ಉದ್ಘಾಟಿಸಿದರು. ಮಚ್ಚಾಮಾಡ ಮೀನಾ ಉತ್ತಯ್ಯ,  ಧರ್ಮಜ ಉತ್ತಪ್ಪ, ಅಜಿತ್, ರಮೇಶ್ ಇತರರಿದ್ದರು.
ಪೊನ್ನಂಪೇಟೆ ಸಮೀಪದ ಹರಿಹರ ಬೆಟ್ಟ ಚಿಕ್ಕಮ್ಮ ದೇವಸ್ಥಾನದ ಮಹಾದ್ವಾರವನ್ನು ಗಣ್ಯರು ಉದ್ಘಾಟಿಸಿದರು. ಮಚ್ಚಾಮಾಡ ಮೀನಾ ಉತ್ತಯ್ಯ, ಧರ್ಮಜ ಉತ್ತಪ್ಪ, ಅಜಿತ್, ರಮೇಶ್ ಇತರರಿದ್ದರು.
Published on
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಮರುಪ್ರತಿಷ್ಠಾಪನೆ ಬ್ರಹ್ಮಕಲಶದ 3ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ಬ್ರಹ್ಮಶ್ರೀ ವೇದಮೂರ್ತಿ ದಿನೇಶ್ ಬನ್ನಿಂತಾಯ ಅವರ ನೇತೃತ್ವದಲ್ಲಿ ವಿವಿಧ ಪೂಜಾವಿಧಿ ವಿಧಾನಗಳು ನಡೆದವು. ಇದೇ ಸಂದರ್ಭ ಹರಿಹರ ಅಡ್ಡರಸ್ತೆಯಲ್ಲಿ ದೇವಿಯ ಹೆಸರಿನಲ್ಲಿ ನೂತನವಾಗಿ ಮಚ್ಚಮಾಡ ಮೀನಾ ಉತ್ತಯ್ಯ ನಿರ್ಮಿಸಿ ಕೊಟ್ಟಿರುವ ಮಹಾ ದ್ವಾರವನ್ನು ಉದ್ಘಾಟಿಸಲಾಯಿತು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾ.ಪಂ. ಸದಸ್ಯ ಮನ್ನೇರ ಎಸ್.ಅಜಿತ್, ಭದ್ರಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಮನ್ನೇರ ಎ.ರಮೇಶ್ ಇದ್ದರು. ದಾನಿಗಳು ಮತ್ತು ಅತಿಥಿಗಳನ್ನು ಬೆಟ್ಟ ಚಿಕ್ಕಮ್ಮ ದೇವಸ್ಥಾನ ಸಮಿತಿ ವತಿಯಿಂದ ಇದೇ ವೇಳೆ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net