ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ, ವಿರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಂಯೋಗದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವೆಲ್ಲ ಇಂದು ಇಷ್ಟು ಶಿಸ್ತು ಹಾಗೂ ಸ್ವತಂತ್ರದಿಂದ ಬದುಕಲು ಸಂವಿಧಾನವೇ ಮೂಲ ಕಾರಣ. ಹೊರಗಿನ ಕೆಲ ದೇಶಗಳೊಂದಿಗೆ ನಮ್ಮ ದೇಶವನ್ನು ಹೋಲಿಕೆ ಮಾಡಿ ನೋಡಿದಂತಹ ಸಂದರ್ಭದಲ್ಲಿ ನಮಗೆ ಸಂವಿಧಾನದ ಮಹತ್ವ ಏನೆಂದು ತಿಳಿಯುತ್ತದೆ. ನಮ್ಮ ಸಂವಿಧಾನ ಅದ್ಭುತವಾದ ಜೀವಂತ ಸಂವಿಧಾನವಾಗಿದ್ದು, ಇದನ್ನು ರಚಿಸಲು ಪಟ್ಟಂತಹ ಶ್ರಮವನ್ನು ಅರಿಯುವುದರೊಂದಿಗೆ, ರಚಿಸಿದಂತಹ ಅಂಬೇಡ್ಕರ್ ಹಾಗೂ ರಚನಾ ಸಮಿತಿಯಲ್ಲಿದ್ದ ಪ್ರತಿಯೊಬ್ಬರನ್ನು ಸ್ಮರಿಸಬೇಕು. ಸಂವಿಧಾನವು ಎಲ್ಲ ಕಾನೂನಿನ ತಾಯಿ ಎಂಬುದನ್ನು ಅರಿತು ಪ್ರತಿಯೊಬ್ಬರ ಹಕ್ಕು ಕರ್ತವ್ಯಗಳನ್ನು ಗೌರವಿಸಿ ನಾವು ಪಾಲಿಸಬೇಕು ಎಂದರು.