ಐಗೂರು ಶಾಲೆಯಲ್ಲಿ ಕಿಚನ್‌ಗಾರ್ಡನ್ ಉದ್ಘಾಟನೆ

ಸೋಮವಾರಪೇಟೆ ಸಮೀಪ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್‌ನ ಭುವನಕ್ಕೊಂದು ಸದನದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಕಿಚನ್‌ಗಾರ್ಡನ್ ಅನ್ನು ಪಾಲೇಕಂಡ ಉತ್ತಮ್ ಮುತ್ತಣ್ಣ ಉದ್ಘಾಟಿಸಿದರು.
ಸೋಮವಾರಪೇಟೆ ಸಮೀಪ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್‌ನ ಭುವನಕ್ಕೊಂದು ಸದನದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಕಿಚನ್‌ಗಾರ್ಡನ್ ಅನ್ನು ಪಾಲೇಕಂಡ ಉತ್ತಮ್ ಮುತ್ತಣ್ಣ ಉದ್ಘಾಟಿಸಿದರು.
Published on
ಸೋಮವಾರಪೇಟೆ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹಕ್ಕು. ನಮ್ಮ ಪರಿಸರವನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಕೋವರ್‌ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಪಾಲೇಕಂಡ ಉತ್ತಮ್ ಮುತ್ತಣ್ಣ ಹೇಳಿದರು.
ಸಮೀಪದ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಭುವನಕ್ಕೊಂದು ಸದನ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಿಚನ್‌ಗಾರ್ಡನ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಉಳಿಯಬೇಕಾದರೆ ಮಕ್ಕಳ ಮನಸ್ಸಿನಲ್ಲಿ ಪ್ರಕೃತಿಯ ಬೀಜ ಬಿತ್ತಬೇಕು ಎಂದರು.
ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಮಣವಟ್ಟೀರ ಹರೀಶ್ ಅಯ್ಯಣ್ಣ ಮಾತನಾಡಿ, ಹೊಸ ಚಿಂತನೆಯ, ಹೊಸ ಮನೋಭಾವದ ಪ್ರಕೃತಿಯನ್ನು ಪ್ರೀತಿಸುವ ಮಕ್ಕಳು ಇಂದು ಬರಬೇಕಾಗಿದೆ. ಮೊಬೈಲ್ ಸಂಸ್ಕೃತಿಯನ್ನು ಬಿಟ್ಟು ಮಕ್ಕಳಿಗೆ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಎಂ.ಯಶ್ವಂತ್ ಕುಮಾರ್ ಮಾತನಾಡಿ, ಇಂದು ರಾಸಾಯನಿಕ ಮುಕ್ತ ತರಕಾರಿ ಬೆಳೆಯ ಅವಶ್ಯಕತೆ ಇದೆ. ಶಾಲಾ ವಿದ್ಯಾರ್ಥಿಗಳಿಗೆ ತಾಜಾ ತರಕಾರಿ, ಸೊಪ್ಪು ಮತ್ತು ಗಿಡಮೂಲಿಕೆಗಳನ್ನು ಬೆಳೆಯಲು ಶಾಲಾ ಆವರಣದಲ್ಲಿ ಕೈತೋಟದ ಅಗತ್ಯವಿದೆ ಎಂದರು.
ವಿಜ್ಞಾನ ಶಿಕ್ಷಕಿ ಎಸ್.ಎಸ್.ರಂಜಿನಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಎಚ್.ಕೆ.ಉಮೇಶ್ ಕುಮಾರ್‌ಸಹ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net