ಯಶಸ್ವಿ ಮೂತ್ರಪಿಂಡ ಕಸಿ ಮೂಲಕ ಸಂಸ್ಥೆಯಲ್ಲಿ ನಡೆದ ಮೊದಲ ಅಂಗಾAಗ ದಾನ ಕಾರ್ಯಾಚರಣೆ ಜೀವ ಉಳಿಸುವ ಮಹತ್ವದ ಸಾಧನೆಯಾಗಿ ಪರಿಣಮಿಸಿದೆ. ಅಂಗಾAಗ ದಾನದ ಮೂಲಕ ಇಬ್ಬರು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ದೊರೆತಿದೆ. ಮೂತ್ರಪಿಂಡ ಕಸಿಗೆ ಅಗತ್ಯ ಸಹಕಾರ ನೀಡಿದ ಜೆ.ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ನೆಪ್ರಾಲಾಜಿ ವಿಭಾಗದ ಮುಖ್ಯಸ್ಥ ಮತ್ತು ಅಂಗಾಗ ಕಸಿ ಸಂಯೋಜಕ ಡಾ. ಮಂಜುನಾಥ ಶೆಟ್ಟಿ, ಪ್ರೊಫೆಸರ್ ಆಫ್ ಯೂರಾಲಜಿ ಮತ್ತು ರಿನಲ್ ಟ್ರಾನ್ಸ್ಪ್ಲಾಂಟ್ ಸರ್ಜನ್ ಡಾ. ಆರ್. ವಿಜಯಕುಮಾರ್, ಪ್ರೊಫೆಸರ್ ಆಫ್ ಯೂರಾಲಜಿ ಡಾ. ಸಚಿನ್ ಧಾರವಾಡ್ಕರ್, ಯೂರಾಲಜಿ ಓಟಿ ಇನ್‌ಚಾರ್ಜ್ ನರ್ಸ್ ರಾಜೇಂದ್ರ, ಓಟಿ ತಾಂತ್ರಿಕ ತಜ್ಞ ಗವಿ ಪ್ರಸಾದ್ ಮೂತ್ರಪಿಂಡ ಕಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.