ಗಣೇಶೋತ್ಸವದಲ್ಲಿ ಮನಸೂರೆಗೊಂಡ ಜಾದೂ

ಸುಂಟಿಕೊಪ್ಪದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ರಾಮಮಂದಿರದಲ್ಲಿ  ಹಮ್ಮಿಕೊಂಡಿರುವ 62ನೇ ವರ್ಷದ ಗೌರಿ ಗಣೇಶೋತ್ಸವದ  ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಕಲಾವಿದ ರಾಜೇಶ್ ಮತ್ತು ತಂಡದಿಂದ ಜಾದು ಪ್ರದರ್ಶನ ಜನಮನ ಸೂರೆಗೊಂಡಿತು.
ಸುಂಟಿಕೊಪ್ಪದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ರಾಮಮಂದಿರದಲ್ಲಿ ಹಮ್ಮಿಕೊಂಡಿರುವ 62ನೇ ವರ್ಷದ ಗೌರಿ ಗಣೇಶೋತ್ಸವದ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಕಲಾವಿದ ರಾಜೇಶ್ ಮತ್ತು ತಂಡದಿಂದ ಜಾದು ಪ್ರದರ್ಶನ ಜನಮನ ಸೂರೆಗೊಂಡಿತು.
Published on
ಸುಂಟಿಕೊಪ್ಪ: ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ರಾಮಮಂದಿರದಲ್ಲಿ ನಡೆಯುತ್ತಿರುವ 62ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಅಮ್ಮತ್ತಿಯ ಕಲಾವಿದ ರಾಜೇಶ್ ಮತ್ತು ತಂಡದ ಜಾದು ಪ್ರದರ್ಶನ ಜನಮನವನ್ನು ಸೂರೆಗೊಳಿಸಿತು.
ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ವಿಘ್ನೇಶ್, ಗಣೇಶೋತ್ಸವ ಭಕ್ತಿ, ಭಾವದ ಸಂಕೇತವಾಗಿದೆ ಎಂದರು.
ಜಾದು ಪ್ರದರ್ಶನದಲ್ಲಿ ಕಲಾವಿದರು ತಮ್ಮ ಕೈಯನ್ನು ಕತ್ತರಿಸಿ ಮತ್ತೆ ಜೋಡಿಸುವುದು, ಕುರ್ಚಿಯನ್ನೇ ಹಾರಾಡುವಂತೆ ಮಾಡಿದ್ದು, ಪುಸ್ತಕದೊಳಗಿನಿಂದ ಗಿಟಾರ್ ತೆಗೆದ ಪ್ರಸಂಗದಲ್ಲಿ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಖಾಲಿ ಬ್ಯಾಗಿನಲ್ಲಿ ಹೂವು, ಗಿಫ್ಟ್ ಬಾಕ್ಸ್, ಚಾಕಲೇಟ್, ಸಾವರ್ಕರ್ ಭಾವಚಿತ್ರ ಅನಾವರಣ, ಹಾರಾಡಿದ ಬಣ್ಣ ಬಣ್ಣದ ಬಲ್ಬ್‌ಗಳು ಸೇರಿದಂತೆ ಹತ್ತು ಹಲವು ಪ್ರಸಂಗ ಮುದ ನೀಡಿದವು. ಕೊನೆಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಮಾಯಾಜಾಲದ ಮೂಲಕ ಪ್ರೇಕ್ಷಕರಿಂದಲೇ ಬಾಕ್ಸಿನಿಂದ ಹೊರ ತರಿಸಿದ್ದು ವಿಶೇಷ ಎನಿಸಿತು. ಈ ಸಂದರ್ಭ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದು ರಾಷ್ಟ್ರಭಕ್ತಿಯ ದ್ಯೋತಕವಾಗಿತ್ತು.
ನಂತರ ಗಣಪತಿಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ದರ್ಶನ ಪಡೆದು ಧನ್ಯತೆ ಮೆರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net