ನಾಪೋಕ್ಲು: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಮಳೆ ಪರಿಣಾಮ ಮನೆಯ ತಡೆಗೋಡೆ ಕುಸಿದು ನಷ್ಟ ಸಂಭವಿಸಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ನೆಲಜಿಯಲ್ಲಿ ಸುರಿಯುತ್ತಿರುವ ಮಳೆಗೆ ಮಂಗಳವಾರ ಬೆಳಗ್ಗೆ ಪಳಂಗಪ್ಪ ಅವರ ವಾಸದ ಮನೆಯ ತಡೆಗೋಡೆ ಕುಸಿಯಿತು. ಈ ಸಂದರ್ಭ ಯಾರಿಗೂ ಪ್ರಾಣಾಪಾಯವಾಗಿಲ್ಲ.