ಕೆ.ಬಿ.ಅಮ್ಮಣಿಗೆ ಜಾನಪದ ಅಕಾಡೆಮಿ ಗರಿ

ಕೆ. ಬಿ. ಅಮ್ಮಣಿ
ಕೆ. ಬಿ. ಅಮ್ಮಣಿ
Published on
ವಿರಾಜಪೇಟೆ: ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಜಾನಪದ ಕಲಾವಿದರಿಗೆ ನೀಡುವ ಕರ್ನಾಟಕ ಜಾನಪದ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಗ್ರಾಮದ ನಿವಾಸಿ ಕೆ. ಬಿ. ಅಮ್ಮಣಿ ಭಾಜನರಾಗಿದ್ದಾರೆ.
ಸೂಲಗಿತ್ತಿ ವೃತ್ತಿ, ಕುಡಿಯ ಜನಾಂಗದ ಜಾನಪದ ಹಾಡುಗಾರಿಕೆ, ಉರುಟಿ ಕೊಟ್ ಜಾನಪದ ನೃತ್ಯದಲ್ಲಿನ ಇವರ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮೂಲತಃ ಇವರು ಚೆಯ್ಯಂಡಾಣೆ ಗ್ರಾಮದ ಚೇಲಾವರದ ಪೂವಮ್ಮ ಮತ್ತು ಕರುಂಬಯ್ಯ ದಂಪತಿಯ ಮಗಳಾಗಿ ಜನಿಸಿದ್ದು, ತೋರ ಗ್ರಾಮದ ಭೀಮಯ್ಯ ಅವರನ್ನು ಮದುವೆಯಾಗಿದ್ದಾರೆ. ಬಾಲ್ಯದಿಂದಲೇ ಉರಟಿಕೊಟ್ ಹಾಗೂ ಕುಡಿಯ ಜನಾಂಗದ ಜಾನಪದ ಹಾಡುಗಾರಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮದುವೆಯ ನಂತರ ಅತ್ತೆಯವರಿಂದ ನಾಟಿ ವೈದ್ಯ ಹಾಗೂ ಸೂಲಗಿತ್ತಿ ವೃತ್ತಿಯನ್ನು ಕಲಿತಿದ್ದು, ಗ್ರಾಮೀಣ ಭಾಗದಲ್ಲಿ ಹಲವಾರು ಹೆರಿಗೆಗಳನ್ನು ಮಾಡಿಸುವುದರೊಂದಿಗೆ ಬಾಣಂತಿ ಮತ್ತು ನವಜಾತ ಶಿಶುವಿನ ಆರೈಕೆ ಹಾಗೂ ಹೆರಿಗೆಯ ನಂತರ ಬಾಣಂತಿಗೆ ನೀಡುವ ವಿವಿಧ ಗಿಡ ಮೂಲಿಕೆ ಔಷಧಗಳನ್ನು ನೀಡುತ್ತಾರೆ. ಜತೆಗೆ ಅಲರ್ಜಿ , ಬಾಲಗ್ರಹ , ಸುಟ್ಟಗಾಯ, ಹಾವು ಹಾಗೂ ವಿಷಪೂರಿತ ಕೀಟ ಕಡಿತ, ಉಳುಕು ಮುಂತಾದವುಗಳಿಗೆ ಔಷಧ ನೀಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net