ಕಾರ್ಗಿಲ್ ವಿಜಯೋತ್ಸವ ಭಾರತೀಯ ಸೈನಿಕರ ಸಾಹಸದ ಪ್ರತೀಕ

 ಕುಶಾಲನಗರದಲ್ಲಿ ಏರ್ಪಡಿಸಿದ್ದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್, ಹವಾಲ್ದಾರ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿ.ಪಿ.ಶಶಿಧರ್, ಎಸ್.ಆರ್.ಮಾದಪ್ಪ, ಕರುಂಬಯ್ಯ, ಡಾ ಪ್ರವೀಣ್, ಎಂ.ಎನ್.ಚAದ್ರಮೋಹನ್ ಮತ್ತಿತರರು ಇದ್ದರು.
ಕುಶಾಲನಗರದಲ್ಲಿ ಏರ್ಪಡಿಸಿದ್ದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್, ಹವಾಲ್ದಾರ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿ.ಪಿ.ಶಶಿಧರ್, ಎಸ್.ಆರ್.ಮಾದಪ್ಪ, ಕರುಂಬಯ್ಯ, ಡಾ ಪ್ರವೀಣ್, ಎಂ.ಎನ್.ಚAದ್ರಮೋಹನ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಕಾರ್ಗಿಲ್ ವಿಜಯೋತ್ಸವ ಭಾರತೀಯ ಸೈನಿಕರ ಸಾಹಸದ ಪ್ರತೀಕವಾಗಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಇಲ್ಲಿನ ಮಾಜಿ ಸೈನಿಕರ ಸಂಘ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಭಾನುವಾರ ನಡೆದ 27 ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸೈನಿಕರು ನಮ್ಮ ಹೆಮ್ಮೆ. ಶತ್ರು ರಾಷ್ಟ್ರವನ್ನು ಮಣಿಸಿ ಭಾರತಾಂಬೆಗೆ ಗೆಲುವಿನ ಉಡುಗೊರೆ ನೀಡಿದ ವೀರ ಯೋಧರಿಗೆ ಶತಶತ ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದೇಶಕ್ಕಾಗಿ ಭಾರತೀಯರಾದ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು. ಅದರಲ್ಲೂ ದೇಶದ ಗಡಿ ರಕ್ಷಣೆಗಾಗಿ ತಮ್ಮ ಜೀವದ ಹಂಗನ್ನು ತೊರೆದು ಯುದ್ಧದಲ್ಲಿ ವೀರ ಮರಣ ಹೊಂದಿದ್ದ ವೀರಯೋಧರ ಶೌರ್ಯ, ಸಾಹಸವನ್ನು ನಾವು ಸ್ಮರಿಸಬೇಕು.
ವೀರ ಪರಂಪರೆಯ ಶೌರ್ಯ ಮತ್ತು ಪರಾಕ್ರಮದ ಯೋಧರ ಸಾಹಸಮಯ ಯುದ್ಧ ಹೋರಾಟದಲ್ಲಿ ಭಾಗಿಯಾಗಿ ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ
ಸೈನಿಕರನ್ನು ಗೌರವಿಸುವ ಮೂಲಕ ಭಾರತ ದೇಶವನ್ನು ಗೌರವಿಸಬೇಕಿದೆ. ನಾವುಗಳು ಇಂತಹ ಸಂದರ್ಭದಲ್ಲಿ ಯೋಧರ ಜತೆ ಸೇರಿ ಅವರ ಸೇನಾ ಅನುಭವ ಪಡೆಯುವುದೇ ನಮಗೆ ಹೆಮ್ಮೆ ತಂದಿದೆ.
ಯುವ ಜನತೆಯಲ್ಲಿ ದೇಶ ಪ್ರೇಮ ಬಿತ್ತುವ ಕೆಲಸ ಬಾಲ್ಯದಿಂದಲೇ ಬೆಳೆಸುವ ಮೂಲಕ ಅವರಲ್ಲಿ ನನ್ನ ದೇಶ, ನಮ್ಮ ಹೊಣೆ ಎಂಬ ರಾಷ್ಟ್ರಾಭಿಮಾನ ಬೆಳೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಎಸ್.ಆರ್. ಮಾದಪ್ಪ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ದೇಶರಕ್ಷಣೆಗೆ ಜೀವವನ್ನೇ ಅರ್ಪಿಸಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ವೀರ ಯೋಧರ ಸೇವೆಯು ಇಂದಿನ ಯುವ ಜನಾಂಗಕ್ಕೆ ಮಾದರಿಯಾದುದು ಎಂದು ಹೇಳಿದರು.
ಸ್ಕೌಟ್ಸ್, ಗೈಡ್ಸ್ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಇಂತಹ ವಿಜಯೋತ್ಸವ
ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ ಮತ್ತು ಸಮಯಪ್ರಜ್ಞೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಯುವ ಪೀಳಿಗೆಯು ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರ ರಕ್ಷಣೆಯಲ್ಲಿ ತೊಡಗಬೇಕು ಎಂದರು.
ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್, ಸ್ಕೌಟ್ಸ್ ತರಬೇತಿ ಆಯುಕ್ತ ಕೆ.ಯು. ರಂಜಿತ್,
ಜಿಲ್ಲಾ ಸಹಾಯಕ ಆಯುಕ್ತರಾದ ಸಿ.ಎಂ.ಸುಲೋಚನಾ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಎನ್.ಎಸ್. ಕರುಂಬಯ್ಯ, ನರೇಶ್ ಕುಮಾರ್ ಮತ್ತಿತರರು ಇದ್ದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 10 ಮಂದಿ ನಿವೃತ್ತ ಮೇಜರ್, ಹವಾಲ್ದಾರ್‌ಗಳನ್ನು ಇದೇ ಸಂದರ್ಭ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net