ಬಲ್ಟಿಕಾಳಂಡ ತಂಡ ವಿರುದ್ಧ ಕನ್ನಂಡಕ್ಕೆ ಭರ್ಜರಿ ಗೆಲುವು

 ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯ ಅವಿಸ್ಮರಣೀಯ ಕ್ಷಣ. .
ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯ ಅವಿಸ್ಮರಣೀಯ ಕ್ಷಣ. .
Published on
ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕನ್ನಂಡ ಬಲ್ಟಿಕಾಳಂಡ ತಂಡದ ವಿರುದ್ಧ 6-0 ಅಂತರದಿಂದ, ಸೋಮೆಯಂಡ ಗಾಡಂಗಡ ವಿರುದ್ಧ 5-0 ಅಂತರದಿಂದ, ಕೊಂಗೆಟೀರ ಬಡ್ಡೀರ ವಿರುದ್ಧ 5-0 ಅಂತರದಿಂದ ಭರ್ಜರಿ ಜಯಬೇರಿ ಬಾರಿಸಿದವು.
ಕನ್ನಂಡ ತಂಡದ ಆಟಗಾರರಾದ ನಾಚಪ್ಪ-2, ಕಾವೇರಪ್ಪ-2, ರೋಹನ್-1, ಬೋಪಣ್ಣ-1 ಗೋಲು ಗಳಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಮುಕ್ಕಾಟಿರ (ಪುಲಿಕೋಟು) ಮತ್ತು ಸುಳ್ಳಿಮಾಡ ತಂಡಗಳು ವಾಕ್ ಓವರ್ ಗಳಿಸಿದವು.
ಉಳಿದಂತೆ ಚಿಮ್ಮಣಮಾಡ ಕನ್ನಿಕಂಡ ವಿರುದ್ಧ 2-1ರಿಂದ, ಕುಲ್ಲೇಟೀರ ಮುಂಡೋಟಿರ ವಿರುದ್ಧ 3-0ರಿಂದ ಗೆಲುವು ಪಡೆದರು. ಚಂಗುಲಂಡ ಆಪಾಡಂಡ ವಿರುದ್ಧ 3-0ರಿಂದ ಜಯ ಸಾಧಿಸಿದರೆ, ಪಳಂಗಂಡ ಪಾಲಂದೀರ ವಿರುದ್ಧ 2-0 ಅಂತರದಿಂದ, ಮುಂಡಿಯೋಳಂಡ ಅಲ್ಲಾರಂಡ ವಿರುದ್ಧ 2-1ರಿಂದ, ಶಿವಚಾಳಿಯಂಡ ಕರ್ತಚೀರ ವಿರುದ್ಧ 2-0ರಿಂದ ಹಾಗೂ ಮೈಂದಪಂಡ ಕೇತಿರ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದವು.
ಅಜ್ಜಮಾಡ ವಿರುದ್ಧ ಮಣವಟ್ಟೀರ 0-4 ರಿಂದ, ಬೇಪಡಿಯಂಡ ವಿರುದ್ಧ ಕೇಲೇಟಿರ 0-1 ರಿಂದ, ಬಿದ್ದಾಟಂಡ ಚಪ್ಪಂಡ ವಿರುದ್ಧ 3-4 ರಿಂದ, ಮಲ್ಲಾಜಿರ ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 0-2ರಿಂದ, ಪಾಡೆಯಂಡ ಬಾದುಮಂಡ ವಿರುದ್ಧ 2-3ರಿಂದ ಗೆಲುವು ಸಾಧಿಸಿದವು.
ಚೇನಂಡ ಹಾಕಿ ಉತ್ಸವದ ಪ್ರಾಯೋಜಕರಲ್ಲಿ ಒಬ್ಬರಾದ ನಾರಾಯಣ ಹೆಲ್ತ್ ಮತ್ತು ಇನ್ಷುರೆನ್ಸ್ ಪ್ರತಿದಿನ ವೀಕ್ಷಕರ ಆರೋಗ್ಯ ಉಚಿತ ತಪಾಸಣೆ ನಡೆಸಿದರು.
ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಒಲಂಪಿಯನ್ ಎಂ.ಎಂ.ಸೋಮಯ್ಯ ಮಂಗಳವಾರ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮನೆಯಪಂಡ ತಂಡದ ಆಟಗಾರರನ್ನು ಹುರಿದುಂಬಿಸಿದರು.
ನ್ಯಾಷನಲ್ ಕ್ರೀಡಾಪಟು ಕನ್ನಂಡ ವರ್ಣ ಭೋಜಮ್ಮ ತಮ್ಮ ಕುಟುಂಬದ ಪರವಾಗಿ ಗೋಲ್ ಕೀಪರ್‌ಆಗಿ ಆಟವಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net