ಕನ್ನಡ ಭಾಷೆಯನ್ನು ಪೂಜ್ಯ ಭಾವದಿಂದ ಕಾಣಬೇಕು

ಕುಶಾಲನಗರ ಸಮೀಪದ ಗಡಿಗ್ರಾಮ ಆವರ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕೃಪಾ ದೇವರಾಜ್, ಆವರ್ತಿ ಮಹದೇವಪ್ಪ, ಕೂರ್ಗಲ್ಲು ಶಿವಕುಮಾರ ಸ್ವಾಮಿ, ಶಿವದೇವ್, ರೇಣುಕಾ ಸ್ವಾಮಿ, ದಿಲೀಪ್ ಮತ್ತಿತರರು ಇದ್ದರು.
ಕುಶಾಲನಗರ ಸಮೀಪದ ಗಡಿಗ್ರಾಮ ಆವರ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕೃಪಾ ದೇವರಾಜ್, ಆವರ್ತಿ ಮಹದೇವಪ್ಪ, ಕೂರ್ಗಲ್ಲು ಶಿವಕುಮಾರ ಸ್ವಾಮಿ, ಶಿವದೇವ್, ರೇಣುಕಾ ಸ್ವಾಮಿ, ದಿಲೀಪ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಕನ್ನಡ ನಾಡಿನ ನೆಲ - ಜಲ, ಆಚಾರ - ವಿಚಾರಗಳು, ಇಲ್ಲಿನ ಸಂಸ್ಕಾರಗಳು ಹಾಗೂ ಮುಖ್ಯವಾಗಿ ಕನ್ನಡ ಭಾಷೆಯನ್ನು ಈ ನೆಲದ ಪ್ರತಿಯೊಬ್ಬರು ಪೂಜ್ಯ ಭಾವದಿಂದ ಕಾಣಬೇಕು ಎಂದು ಸಾಹಿತಿ ಮಡಿಕೇರಿಯ ಕೃಪಾ ದೇವರಾಜು ಹೇಳಿದರು. ಕುಶಾಲನಗರ ಸಮೀಪದ ಗಡಿಗ್ರಾಮ ಆವರ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ನಾಡಿನ ನೆಲ ಹಾಗೂ ಜಲವೇ ಶ್ರೇಷ್ಠ ಸಂಪತ್ತು. ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆ ಅಪೂರ್ವವಾದುದು. ಅನ್ಯ ಭಾಷೆಗಳ ಹಾವಳಿಯ ನಡುವೆಯೂ ಗಡಿ ಜಿಲ್ಲೆಗಳಲ್ಲಿ ಕನ್ನಡ ಇಲ್ಲಿನ ಪ್ರತಿ ವಾಸಿಗಳ ಜೀವನದ ಹಾಸು ಹೊಕ್ಕಾಗಬೇಕಿದೆ. ಎಲ್ಲರೂ ಈ ನಾಡು ನುಡಿಯನ್ನು ಗೌರವಿಸಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಆವರ್ತಿ ಮಹಾದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೂರ್ಗಲ್ಲು ಶಿವಕುಮಾರ ಸ್ವಾಮಿ, ಬೆಟ್ಟದಪುರದ ಪತ್ರಕರ್ತ ಶಿವದೇವ್, ಆವರ್ತಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರೇಣುಕಾ ಸ್ವಾಮಿ, ದಿಲೀಪ್, ಜಗನ್ನಾಥ್, ಗ್ರಾಮದ ಮುಖಂಡ ಚಂದ್ರಶೇಖರ್, ಧರ್ಮ ಮತ್ತಿತರರು ಇದ್ದರು.
ರಾಜ್ಯೋತ್ಸವದ ಅಂಗವಾಗಿ ಇಡೀ ಗ್ರಾಮವನ್ನು ತಳಿರು ತೋರಣಗಳು ಹಾಗೂ ಕನ್ನಡ ಬಾವುಟಗಳಿಂದ ಅಲಂಕರಿಸಲಾಗಿತ್ತು.
ಇದೇ ಸಂದರ್ಭ ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿಕೊಟ್ಟ ಕನ್ನಡದ ಅಷ್ಟ ಕವಿಗಳ ಭಾವಚಿತ್ರಗಳನ್ನು ವೇದಿಕೆಯಲ್ಲಿ ಅಳವಡಿಸಲಾಗಿತ್ತು.
ಇತ್ತೀಚೆಗೆ ನಿಧನರಾದ ಪಟೇಲ್ ಗುರುಮೂರ್ತಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ 30 ವೈದ್ಯ ಸಿಬ್ಬಂದಿ ತಂಡ ಗ್ರಾಮಸ್ಥರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿಕೊಟ್ಟಿತು. ಮಡಿಕೇರಿ ರಕ್ತ ನಿಧಿ ವಿಭಾಗದ ವತಿಯಿಂದ ರಕ್ತದಾನ ಶಿಬಿರವೂ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net