ಹನ್ನೊಂದನೇ ಶತಮಾನದ ಕೊನೆಯ ಭಾಗ ಮತ್ತು ೧೨ನೇ ಶತಮಾನದಲ್ಲಿದ್ದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಮ್ಮ ಸುತ್ತಮುತ್ತಲ ಸಮಾಜದ ಡಾಂಬಿಕತವನ್ನು ಬಯಲಿಗೆಳೆಯುವ ಮೂಲಕ ನವ ಸಮಾಜದ ನಿರ್ಮಾಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ವಚನಕಾರ ದೇವರದಾಸಿಮಯ್ಯ ಸಮಾಜದ ಡಾಂಬಿಕತನವನ್ನು ತಮ್ಮ ವಚನಗಳಲ್ಲಿ ವಿಡಂಬನೆ ಮಾಡಿರುವುದನ್ನು ಉಲ್ಲೇಖಿಸಿ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯರ ವಚನಗಳನ್ನು ಉಲ್ಲೇಖಿಸಿ, ಇವರೆಲ್ಲರು ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು, ಅದನ್ನು ವ್ಯರ್ಥಮಾಡದೆ, ಸಮಾನತೆಯ ಪರಿಕಲ್ಪನೆಯೊಂದಿಗೆ, ಕಾಯಕ ತತ್ವದ ಮೂಲಕ ಅದನ್ನು ಸಾರ್ಥಕಗೊಳಿಸುವಂತೆ ಕರೆ ನೀಡಿದ್ದರು. ಅವರೆಲ್ಲರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆಯೆಂದು ನುಡಿದರು.