ಬ್ರಿಗೇಡಿಯರ್ ಹುದ್ದೆಗೆ ಕಂಡ್ರಥಂಡ ನಿತಿನ್ ಕುಟ್ಟಪ್ಪ ಬಡ್ತಿ

ಭಾರತೀಯ ಸೇನೆಯ ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದ ಕಂಡ್ರಥಂಡ ನಿತಿನ್ ಕುಟ್ಟಪ್ಪ ಅವರೊಂದಿಗೆ ಪತ್ನಿ ಮಾಯಾ ಮತ್ತು ಪುತ್ರ ರೋನಿತ್ ಇದ್ದಾರೆ.
ಭಾರತೀಯ ಸೇನೆಯ ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದ ಕಂಡ್ರಥಂಡ ನಿತಿನ್ ಕುಟ್ಟಪ್ಪ ಅವರೊಂದಿಗೆ ಪತ್ನಿ ಮಾಯಾ ಮತ್ತು ಪುತ್ರ ರೋನಿತ್ ಇದ್ದಾರೆ.
Published on
ನಾಪೋಕ್ಲು: ಭಾರತೀಯ ಸೇನೆಯ ಬ್ರಿಗೇಡಿಯರ್ ಹುದ್ದೆಗೆ ಕರ್ನಲ್ ಕೊಡಗಿನ ಕಂಡ್ರಥಂಡ ನಿತಿನ್ ಕುಟ್ಟಪ್ಪ ಬಡ್ತಿ ಪಡೆದಿದ್ದಾರೆ.
21ನೇ ಮದ್ರಾಸ್ ರೆಜಿಮೆಂಟ್‌ನ ಕರ್ನಲ್ ಕಂಡ್ರಥಂಡ ನಿತಿನ್ ಕುಟ್ಟಪ್ಪ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದರು. ಇದಕ್ಕೂ ಮೊದಲು ಊಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದ ಕೆ.ಎಂ.ಮುತ್ತಣ್ಣ ಮತ್ತು ಪುಷ್ಪಾ ಮುತ್ತಣ್ಣ ದಂಪತಿ ಪುತ್ರರಾಗಿದ್ದು, ಬ್ರಿಗೇಡಿಯರ್ ನಿತಿನ್ ಕುಟ್ಟಪ್ಪ ಅವರೊಂದಿಗೆ ಪತ್ನಿ ಮಾಯಾ(ಬೊಪ್ಪಂಡ) ಮತ್ತು ಪುತ್ರ ರೋನಿತ್ ವಾಸವಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net