ನಾಪೋಕ್ಲು: ಇಲ್ಲಿಗೆ ಸಮೀಪದ ಮುರ್ನಾಡು ಗೌಡ ಮಹಿಳಾ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕಲ್ಲುಮುಟ್ಲು ಜಶ್ಮಿ ಚಿಂತು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಮುರ್ನಾಡು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ಸ್ಥಾಪನಾ ಸಭೆಯಲ್ಲಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಎಲ್ಲರ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬೈಲೋಳಿ ಮೇನಕಾ ನಂದ, ಕಾರ್ಯದರ್ಶಿಯಾಗಿ ತೆಕ್ಕಡೆ ಭವ್ಯ ಪುರುಷೋತ್ತಮ್, ಸಹ ಕಾರ್ಯದರ್ಶಿಯಾಗಿ ಮೆರ್ಕಜ್ಜೆ ಸುಷ್ಮಾ ಶಿವಪ್ರಕಾಶ್, ಖಜಾಂಚಿಯಾಗಿ ತೆಕ್ಕಡೆ ಆಶಾ ಪ್ರಸನ್ನ, ಕಲ್ಲುಮುಟ್ಲು ಲತಾ ಬೋಪಯ್ಯ ಅವಿರೋಧವಾಗಿ ಆಯ್ಕೆಯಾದರು.
ಸಭೆಯಲ್ಲಿ ಒಕ್ಕೂಟದ ಸದಸ್ಯರಾದ ಅಂಚೆಮನೆ ದಮಯಂತಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹಿರಿಯರಿಂದ ನಾವು ಕಲಿತು ಮುಂದಿನ ಪೀಳಿಗೆಗೂ ಕಲಿಸಬೇಕು. ಮಹಿಳೆಯರ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣಕ್ಕೆ ಒಕ್ಕೂಟವು ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ ಎಂದರು.
ಒಕ್ಕೂಟದ ಸದಸ್ಯರಾದ ಮುಕ್ಕಾಟಿ ಚುಷ್ಮಾ ದಿಲೀಪ್, ಮೆರ್ಕಜ್ಜೆ ಕೃತಿಕಾ ಪ್ರಮೋದ್, ಬೈಲೋಳಿ ದಿವ್ಯ ತೇಜ್ ಕುಮಾರ್, ಬಿಳಿಯಾರ ವನಿತಾ, ಮಮತಾ, ಮೌನ, ತೆಕ್ಕಡೆ ಅನು ಭೀಮಯ್ಯ ಸಾವಿತ್ರಿ ಇವರುಗಳೊಂದಿಗೆ ಒಕ್ಕೂಟದ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು.