ಕಡವಡಿ ದೈವಕೋಲ ಮಹೋತ್ಸವ ಸಂಪನ್ನ

ಸಣ್ಣಪುಲಿ ಕೋಟು ಗ್ರಾಮದ ಕುಯ್ಯಮುಡಿ ಕಡವಡಿ ಕುಟುಂಬಸ್ಥರಿಂದ ಎರಡು ವರ್ಷಕ್ಕೆ ಒಮ್ಮೆ ನಡೆಯುವ ವಿಷ್ಣುಮೂರ್ತಿ ಕೋಲ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಸಣ್ಣಪುಲಿ ಕೋಟು ಗ್ರಾಮದ ಕುಯ್ಯಮುಡಿ ಕಡವಡಿ ಕುಟುಂಬಸ್ಥರಿಂದ ಎರಡು ವರ್ಷಕ್ಕೆ ಒಮ್ಮೆ ನಡೆಯುವ ವಿಷ್ಣುಮೂರ್ತಿ ಕೋಲ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
Published on
ನಾಪೋಕ್ಲು: ಸಮೀಪದ ಸಣ್ಣಪುಲಿ ಕೋಟು ಗ್ರಾಮದ ಕುಯ್ಯಮುಡಿ ಕಡವಡಿ ಕುಟುಂಬಸ್ಥರಿಂದ ಎರಡು ವರ್ಷಕ್ಕೆ ಒಮ್ಮೆ ನಡೆಯುವ ವಿಷ್ಣುಮೂರ್ತಿ ಹಾಗೂ ಸಹ ಪರಿವಾರಗಳ ದೈವಕೋಲ ಮಹೋತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಗುರುವಾರ ಬೆಳಗ್ಗೆ 6 ಗಂಟೆಗೆ ಕುಯ್ಯಮುಡಿ ದೊಡ್ಡ ಮನೆಯಿಂದ ಸಂಪ್ರದಾಯದಂತೆ ಭಂಡಾರ ತರಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಬೊಳ್ಳಾಟಂ, ರಾತ್ರಿ ಕುಟ್ಟಿಚಾತನ್, ಕಾಲಭೈರವ, ಮಂದನ ಮೂರ್ತಿ ಹಾಗೂ ಸಹ ಪರಿವಾರಗಳ ಕೋಲ ಜರುಗಿತು. ಶುಕ್ರವಾರ ಭೂಮಿ ಗುಳಿಗ, ರಾವು ಗುಳಿಗ ಕೋಲ ಹಾಗೂ ವಿಷ್ಣುಮೂರ್ತಿ ಮೇಲೇರಿ ಜರುಗಿದವು.
ಈ ಸಂದರ್ಭ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ವಿಷ್ಣುಮೂರ್ತಿ ಬಾರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕಡವಡಿ ಕುಟುಂಬದ ಅಧ್ಯಕ್ಷ ಚರಣ್‌ಕುಮಾರ್(ಲವ), ಗೌರವಾಧ್ಯಕ್ಷ ಪೂರ್ಣಯ್ಯ, ಪ್ರಧಾನ ಅರ್ಚಕ ಶ್ರೀನಿವಾಸ್(ಪುಟ್ಟು), ಆಡಳಿತ ಮಂಡಳಿ ಸದಸ್ಯರು, ಭಕ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಹರಕೆ ಸೇವೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net