ವಿರಾಜಪೇಟೆ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರದ ರಾಯಲ್ ಫ್ರೆಂಡ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್‌ಗಳನ್ನು ವಿತರಿಸಲಾಯಿತು. ಜಿಷ್ಣು , ಲವೀಶ್, ಲೋಕೆಶ್, ರವೂಫ್, ಹೇಮಲತಾ ಇದ್ದರು.
Published on:
Copied
Follow Us
ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆ ಅಧ್ಯಕ್ಷ ಜಿಷ್ಣುಕುಮಾರ್ ಹೇಳಿಕೆ
ವಿರಾಜಪೇಟೆ: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯು ಸತತ ಮೂರು ವರ್ಷಗಳಿಂದ ದೇಸಿ ಕ್ರೀಡೆ ಕಬಡ್ಡಿಯನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಜಿಷ್ಣುಕುಮಾರ್ ತಿಳಿಸಿದರು.
ವಿರಾಜಪೇಟೆ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಗ್ರಾಮದ ರಾಯಲ್ ಫ್ರೆಂಡ್ಸ್ ರಾಮನಗರ (ಆರ್‌ಕೆಪಿಎಲ್) ವತಿಯಿಂದ ಹೆಗ್ಗಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದರು.
ಶಾಲಾ ಮುಖ್ಯಶಿಕ್ಷಕರ ಕೋರಿಕೆಯ ಮೇರೆಗೆ ಸಂಸ್ಥೆಯಲ್ಲಿ ಉಳಿಕೆಯಾದ ಹಣ 40 ಸಾವಿರ ರೂ. ವೆಚ್ಚದಲ್ಲಿ 98 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ನೀಡಿರುವ ಬ್ಯಾಗ್ ಸದ್ಬಳಕೆ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಗ್ರಾಮಕ್ಕೆ ಕೀರ್ತಿ ಗಳಿಸುವಂತಾಗಬೇಕು ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಮಾತನಾಡಿ, ವಿದ್ಯಾದಾನ ಸರ್ವ ಶ್ರೇಷ್ಠವಾದುದು. ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯು ಕ್ರೀಡೆಗೆ ಪ್ರೋತ್ಸಾಹ ನೀಡಿ ಬೆಳೆಸುವುದರೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಪಾತ್ರ ಮಹತ್ತರವಾದುದು ಎಂದರು.
ಸಹಾರ ಫ್ರೆಂಡ್ಸ್ ಸೇವಾ ಸಂಸ್ಥೆ ವಿರಾಜಪೇಟೆ ಸಂಸ್ಥಾಪಕ ರವೂಫ್ ಮಾತನಾಡಿ, ಸಂಘ ಸಂಸ್ಥೆಗಳು ಗ್ರಾಮೀಣ ವಿದ್ಯಾರ್ಥಿಗಳ ಏಳಿಗೆಗಾಗಿ ಉತ್ತಮ ಭವಿಷ್ಯಕ್ಕಾಗಿ ಸೇವಾ ಮನೋಭಾವದಿಂದ ಪಠ್ಯೇತರ ಚಟುವಟಿಕೆಗೆ ಪೂರಕವಾಗಿರುವ ಸಾಮಗ್ರಿಗಳನ್ನು ವಿತರಣೆ ಮಾಡುವುದು ಉತ್ತಮ ಎಂದು ಹೇಳಿದರು.
ಹಿರಿಯ ಶಿಕ್ಷಕಿ ಹೇಮಲತಾ ಮಾತನಾಡಿದರು. ರಾಯಲ್ ಫ್ರೆಂಡ್ಸ್ ರಾಮನಗರ ಸಂಸ್ಥೆಯ ಲವೀಶ್, ಸುರೇಶ್, ಲೋಕೇಶ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರೋಹಿಣಿ ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಳ ಶಿಕ್ಷಕರಾದ ನಾಜೀರಾ, ಲೂಸಿ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯ ಸದಸ್ಯರು ಹಾಜರಿದ್ದರು.