ಶಾಂತಿ, ಸೌಹಾರ್ದತೆ ಕಾಪಾಡಲು ಕೈಜೋಡಿಸಿ

ಮುಸ್ಲಿಮರ ನೂತನ ವರ್ಷ ಆಚರಣೆಯ ಮೊಹರಂ ಅಂಗವಾಗಿ ಮಸೀದಿಗಳ ಮುಖಂಡರೊಂದಿಗೆ ಸೌಹಾರ್ದ ಸಭೆಯನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಮುಸ್ಲಿಮರ ನೂತನ ವರ್ಷ ಆಚರಣೆಯ ಮೊಹರಂ ಅಂಗವಾಗಿ ಮಸೀದಿಗಳ ಮುಖಂಡರೊಂದಿಗೆ ಸೌಹಾರ್ದ ಸಭೆಯನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಸಲಹೆ
ಸುಂಟಿಕೊಪ್ಪ: ಮುಸ್ಲಿಮರ ನೂತನ ವರ್ಷ ಆಚರಣೆಯ ಮೊಹರಂ ಅಂಗವಾಗಿ ಮಸೀದಿಗಳ ಮುಖಂಡರೊಂದಿಗೆ ಸೌಹಾರ್ದ ಸಭೆಯನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿ, ಸುಂಟಿಕೊಪ್ಪದಲ್ಲಿ ಶಾಂತಿ, ಸೌಹಾರ್ದತೆಯನ್ನು ಹಿಂದಿನಿಂದಿಲೂ ಕಾಯ್ದುಕೊಂಡು ಬರಲಾಗಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಮೊಹರಂ ಆಚರಿಸುವ ವಿಧಾನದ ಬಗ್ಗೆ ಧಾರ್ಮಿಕ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಈ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಎಂದಿನಂತೆ ಪ್ರಾರ್ಥನೆ ಮಾತ್ರ ನೆರವೇರಿಸಲಾಗುತ್ತದೆ. ಇದಕ್ಕೆ ಯಾವುದೇ ರೀತಿಯ ವಿಶೇಷತೆಯನ್ನು ನೀಡಲಾಗುವುದಿಲ್ಲ ಎಂದು ಧಾರ್ಮಿಕ ಮುಖಂಡರು ಹೇಳಿದರು.
ವಿವಿಧ ಧಾರ್ಮಿಕ ಕೇಂದ್ರದ ಮುಖಂಡರಾದ ಎಚ್.ಯು.ರಫೀಕ್‌ಖಾನ್, ಕೆ.ಇ.ಕರೀಂ, ಎಂ.ಎ.ಉಸ್ಮಾನ್, ಅದೂಸಾ, ಗರಗಂದೂರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯೂನಸ್, ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಅಜೀಜ್, ಸುಹೈಲ್,ಫಯಾಜ್, ಶರೀಫ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net