ಜಿಂಗಲಕ ಬಾಯ್ಸ ತಂಡ ಚಾಂಪಿಯನ್

ಪೊನ್ನಂಪೇಟೆ ಸಮೀಪದ ಕಿರುಗೂರಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಜಿಂಗಲಕ ಬಾಯ್ಸ ತಂಡ ಚಾಂಪಿಯನ್ ಪಟ್ಟ ಅಲಂಕಿರಿಸಿತು. ಕೀರ್ತನ್, ಬೋಪಣ್ಣ, ಸುಧೀರ್, ದೀಪಕ್ , ಜಾಯೆಶ್ ಹಾಗೂ ಇತರರಿದ್ದರು.
ಪೊನ್ನಂಪೇಟೆ ಸಮೀಪದ ಕಿರುಗೂರಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಜಿಂಗಲಕ ಬಾಯ್ಸ ತಂಡ ಚಾಂಪಿಯನ್ ಪಟ್ಟ ಅಲಂಕಿರಿಸಿತು. ಕೀರ್ತನ್, ಬೋಪಣ್ಣ, ಸುಧೀರ್, ದೀಪಕ್ , ಜಾಯೆಶ್ ಹಾಗೂ ಇತರರಿದ್ದರು.
Published on
ಪೊನ್ನಂಪೇಟೆ:ತಾಲೂಕಿನ ಕಿರುಗೂರಿನಲ್ಲಿ ನಡೆದ ಕಿರುಗೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಜಿಂಗಲಕ ಬಾಯ್ಸ ತಂಡ ಚಾಂಪಿಯನ್ ಆಗಿದೆ.
ಇದೇ ಮೊದಲ ಬಾರಿಗೆ ಕಿರುಗೂರು ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪಂದ್ಯಾಟದ ಫೈನಲ್ ಭಾನುವಾರ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸಿದ್ದವು. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ತಂಡಗಳನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿತ್ತು. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಜಿಂಗಲಕ ಬಾಯ್ಸ ಮತ್ತು ಗುಮ್ಮತ್ತ್ ಮಾಡ್ ತಂಡಗಳು ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಜಿಂಗಲಕ ಬಾಯ್ಸ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ವಿಜೇತ ತಂಡಕ್ಕೆ ನಗದು ಬಹುಮಾನ, ಆಕರ್ಷಕ ಟ್ರೋಫಿ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ, ಚೆಪ್ಪುಡೀರ ಬೋಪಣ್ಣ, ಆಲೇಮಾಡ ಸುಧೀರ್, ಚಿರಿಯಪಂಡ ಕೀರ್ತನ್, ಆಲೇಮಾಡ ಮಂಜು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net