ಗೋವುಗಳು ನಡೆದಾಡುವ ಆಸ್ಪತ್ರೆ ಇದ್ದಂತೆ

 ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪುಣ್ಯಕೋಟಿ ಗೋಶಾಲೆಗೆ ಸ್ವಾಮಿ ಸೋಮನಾಥನಂದಪುರಿ ಭೇಟಿ ನೀಡಿದ್ದರು. ಶ್ರೀನಿವಾಸ್, ಅಜಿತ್ ಕುಮಾರ್, ಜಯಶ್ರೀ ಅಜಿತ್ ಕುಮಾರ್, ಮಧುಸೂದನ್, ಜನಾರ್ದನ್ ಮತ್ತಿತರರು ಇದ್ದರು.
ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪುಣ್ಯಕೋಟಿ ಗೋಶಾಲೆಗೆ ಸ್ವಾಮಿ ಸೋಮನಾಥನಂದಪುರಿ ಭೇಟಿ ನೀಡಿದ್ದರು. ಶ್ರೀನಿವಾಸ್, ಅಜಿತ್ ಕುಮಾರ್, ಜಯಶ್ರೀ ಅಜಿತ್ ಕುಮಾರ್, ಮಧುಸೂದನ್, ಜನಾರ್ದನ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಮಾನವನಿಗೆ ಹುಟ್ಟಿನಿಂದ ಸಾವಿನ ತನಕ ಗೋವುಗಳು ಅಮೃತ ಸಮಾನವಾದ ಹಾಲು ಮತ್ತಿತರ ಔಷಧಿ ಮೂಲಗಳನ್ನು ಕರುಣಿಸುವ ಮೂಲಕ ವಿಜ್ಞಾನ ಯುಗದಲ್ಲಿ ನಡೆದಾಡುವ ಆಸ್ಪತ್ರೆಯಂತೆ ಕೆಲಸ ನಿರ್ವಹಿಸುತ್ತವೆ ಎಂದು ಸ್ವಾಮಿ ಸೋಮನಾಥನಂದಪುರಿ ಹೇಳಿದರು. ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪುಣ್ಯಕೋಟಿ ಗೋಶಾಲೆಗೆ ಭಾನುವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಗೋವುಗಳ ಪಾಲನೆ, ಸಂರಕ್ಷಣೆ ಸಂಬAಧ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಗೋ ಸೇವೆ ಪವಿತ್ರವಾದ ಸೇವೆ ಎಂದರು.
ಗೋಶಾಲೆ ಮುಖ್ಯಸ್ಥರಾದ ಶ್ರೀನಿವಾಸ್ ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಮಾದಾಪಟ್ಟಣದ ಗ್ರಾಮದಲ್ಲಿರುವ ತನ್ನ ನಾಲ್ಕು ಎಕರೆ ಪ್ರದೇಶದಲ್ಲಿ ಗೋಶಾಲೆ ಆರಂಭಿಸಿದ್ದು ಇದೀಗ ಸುಮಾರು 60 ಕ್ಕೂ ಅಧಿಕ ಗೋವುಗಳು ನೆಲೆಸಿವೆ. ಈ ಸಂಬAಧ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಉದ್ಯಮಿ ಅಜಿತ್ ಕುಮಾರ್, ಜಯಶ್ರೀ ಅಜಿತ್ ಕುಮಾರ್, ಪ್ರಮುಖರಾದ ಮಧುಸೂದನ್, ಜನಾರ್ದನ್, ರಾಜೀವ್, ಅನೀಶ್, ಕೃಷ್ಣಮೂರ್ತಿ, ಮನು ರೈ, ಅರುಣ, ಪುಣ್ಯಕೋಟಿ ಗೋಶಾಲೆ ಟ್ರಸ್ಟ್ ಅಧ್ಯಕ್ಷೆ ನಸ್ಮಿತಾ ಶ್ರೀನಿವಾಸ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net