ಅಂಗವಿಕಲರು ಹಾಗೂ ವೃದ್ಧರಿಗೆ ವೇತನ ನೀಡಲು 32,000 ರೂ. ಆದಾಯ ನಿಗದಿಪಡಿಸಿದೆ. ಆದಾಯ ಪ್ರಮಾಣ ಪತ್ರ ನೀಡಿದರೆ ಮಾತ್ರ ಅಂಗವಿಕಲರು ಹಾಗೂ ವೃದ್ಧಾಪ್ಯ ವೇತನ ನೀಡುವುದಾಗಿ ತಿಳಿಸಿದ್ದು, ಇದು ಅಮಾನವೀಯ. ಇದರಿಂದಾಗಿ ಅಂಗವಿಕಲರು, ಮಹಿಳೆಯರು ಹಾಗೂ ವೃದ್ಧರು ಮಾನಸಿಕವಾಗಿ ಕುಗ್ಗಿದ್ದಾರೆ. ಇಂತಹ ವೇತನಗಳನ್ನು ನಂಬಿ ಬದುಕುತಿದ್ದ ಮಹಿಳೆಯರು, ವೃದ್ಧರ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದರು.