ಫಲವತ್ತತೆಯ ಮಣ್ಣು ಉಳಿಸುವುದು ಪಾಲಕರ ಜವಾಬ್ದಾರಿ

 ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಾಗಾರದದಲ್ಲಿ ಮಡಿಕೇರಿ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜಣ್ಣ ಅವರು ಜೈವಿಕ ಪೋಷಕಾಂಶಗಳ ಕುರಿತು ಮಾಹಿತಿ ನೀಡಿದರು. ಪ್ರಕಾಶ್, ಸುಬ್ರಮಣಿ ಇದ್ದರು.
ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಾಗಾರದದಲ್ಲಿ ಮಡಿಕೇರಿ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜಣ್ಣ ಅವರು ಜೈವಿಕ ಪೋಷಕಾಂಶಗಳ ಕುರಿತು ಮಾಹಿತಿ ನೀಡಿದರು. ಪ್ರಕಾಶ್, ಸುಬ್ರಮಣಿ ಇದ್ದರು.
Published on
ಸೋಮವಾರಪೇಟೆ: ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಫಲವತ್ತತೆಯ ಮಣ್ಣನ್ನು ಉಳಿಸಿ ಕೊಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜಣ್ಣ ಹೇಳಿದರು.
ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಮತ್ತು ಸಂಶೋಧನ ಸಂಸ್ಥೆ ಸಹಯೋಗದಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ, ವಿಜ್ಞಾನ ಆಧಾರಿತ ಪೋಷಕಾಂಶ ಮತ್ತು ಇತರೆ ಪರಿಕರಗಳ ಅಳವಡಿಕೆ ಕುರಿತ ಜಾಗೃತಿ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಣ್ಣಿಕ ಫಲವತ್ತತೆ ಕಾಪಾಡಿಕೊಳ್ಳಬೇಕಾದರೆ ಜೈವಿಕ ಗೊಬ್ಬರ ಮತ್ತು ಸಾವಯವ ಪೋಷಕಾಂಶಗಳನ್ನು ಪೂರೈಕೆ ಮಾಡಬೇಕು ಎಂದು ಹೇಳಿದರು.
ಮಿಶ್ರಗೊಬ್ಬರ ತಯಾರಿಕೆಯಲ್ಲಿ ಜೈವಿಕ ಕೊಳೆಯುವ ಘನತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡುವುದು ಭರವಸೆಯ ಪ್ರಯತ್ನವಾಗಿದೆ. ಕೃಷಿ ಅಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಮರುಬಳಕೆ ಹಾಗೂ ಮಣ್ಣಿನ ಸುಧಾರಣೆಗೆ ಇದು ಅತ್ಯವಶ್ಯಕ ವಿಧಾನವಾಗಿದೆ. ಕಾಂಪೋಸ್ಟಿಂಗ್ ಎನ್ನುವುದು ಜೈವಿಕ ವಸ್ತುಗಳನ್ನು ಪೋಷಕಾಂಶಗಳಿಂದ ರಸಗೊಬ್ಬರವಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಕಾಂಪೋಸ್ಟ್ ಪೋಷಕಾಂಶಗಳನ್ನು ತಯಾರಿಸುವುದು ಬಹುತೇಕ ರೈತರಿಗೆ ತಿಳಿದಿದೆ. ಆದರೂ ಸಂಶೋಧನ ಕೇಂದ್ರದ ಮೂಲಕ ರೈತರಿಗೆ ತರಬೇತಿ ಕಾರ್ಯಾಗಾರವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಹಿರಿಯ ವಿಜ್ಞಾನಿ ಶಿವಕುಮಾರ್ ಮಾತನಾಡಿ, ಕಾಫಿ ಕೃಷಿ ಜೀವನ ಕಟ್ಟಿಕೊಟ್ಟರೆ, ಕಾಳುಮೆಣಸು ಶ್ರೀಮಂತಿಕೆ ದಯಪಾಲಿಸಿದೆ. ಹವಾಮಾನ ವೈಪ್ಯರಿತ್ಯ ಹಾಗೂ ರೋಗಬಾಧೆಯಿಂದ ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ಮೊದಲು ಉತ್ತಮ ಗುಣಮಟ್ಟದ ತಳಿ ಆಯ್ಕೆ ಮಾಡಿಕೊಳ್ಳಬೇಕು. ಸಕಾಲದಲ್ಲಿ ನೀರು ಮತ್ತು ಪೋಷಕಾಂಶಗಳನ್ನು ಬಳ್ಳಿಗೆ ಪೂರೈಕೆ ಮಾಡಿದರೆ ಮಾತ್ರ ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳಬಹುದು. ಮಣ್ಣು ಪರೀಕ್ಷೆಯ ನಂತರ ಸಾವಯವ ಪೋಷಕಾಂಶಗಳನ್ನು ಅಗತ್ಯತೆಗೆ ತಕ್ಕಂತೆ ಹಾಕಬೇಕು. ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಗೆ ದೂರವಾಣಿ ಕರೆ ಮಾಡಿದರೆ, ಎಲ್ಲ ಸಲಹೆ, ತರಬೇತಿ ನೀಡಲಾಗುವುದು ಎಂದು ಹೇಳಿದರು.
ಅಪ್ಪಂಗಳ ಸಂಶೋಧನ ಕೇಂದ್ರದಲ್ಲಿ ವಿವಿಧ ತಳಿಯ ಕಾಳುಮೆಣಸಿನ ಬಳ್ಳಿಗಳು ಲಭ್ಯವಿದೆ. ಕೇವಲ 10 ಬುಟ್ಟಿಗಳನ್ನು ನೀಡಲಾಗುತ್ತದೆ. ಅದರಿಂದ ಹೆಚ್ಚಿನ ಬಳ್ಳಿ ಬೆಳೆಸಬಹುದು ಎಂದು ಹೇಳಿದರು.
ಹಿರಿಯ ವಿಜ್ಞಾನಿ ಡಾ.ಹೊನ್ನಪ್ಪ, ಡಾ.ಗಾಯತ್ರಿ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಜೀವಾಮೃತ ತಯಾರಿಕೆ, ಟ್ರೈಕೋಡರ್ಮಾದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಕೆ.ಶಿವಪ್ರಕಾಶ್, ಮಾಜಿ ಅಧ್ಯಕ್ಷ ಎಚ್.ಡಿ.ಸುಬ್ರಮಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net