ಪೋಷಣ್ ಅಭಿಯಾನ ಯೋಜನೆಯಡಿ ಸೀಮಂತ ಕಾರ್ಯಕ್ರಮವನ್ನು ಭವ್ಯ ಅವರಿಗೆ ನೆರವೇರಿಸಲಾಯಿತು. ಸವಿತಾ ಕೀರ್ತನ್, ಪ್ರಸನ್ನ ಕುಮಾರ್, ದೇವಕಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಸ್ಕೃತಿ, ಪರಂಪರೆ ಬೆಳೆಸುವ ಕರ್ತವ್ಯ ತಾಯಂದಿಯರದ್ದು
ಮಡಿಕೇರಿ: ನಮ್ಮ ಸಂಸ್ಕೃತಿ ಪರಂಪರೆಯನ್ನು ಕಾಪಾಡುವುದರ ಜತೆಗೆ ಮುಂದಿನ ಪೀಳಿಗೆ ತಿಳಿಸುವ ಮತ್ತು ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ತಾಯಂದಿಯರ ಕರ್ತವ್ಯ ಎಂದು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಹೇಳಿದರು.
ಬಿಳಿಗೇರಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಾತೃಭಾಷಾ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಮಾತೃಭಾಷೆ, ನಮ್ಮ ಗುರುತನ್ನು ಉಳಿಸೋಣ ಬೆಳೆಸಬೇಕು. ಮನೆಯಲ್ಲಿ ತಪ್ಪದೇ ನಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತನಾಡುವಂತಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಕಾಪಾಡುವುದರ ಜತೆಗೆ ಮುಂದಿನ ಪೀಳಿಗೆಯನ್ನು ಬೆಳೆಸುವ ಕರ್ತವ್ಯ ಎಲ್ಲ ತಾಯಂದಿರದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಪಾಲ್ಗೊಂಡು ಮಾತನಾಡಿ, ಪೋಷಣ್ ಅಭಿಯಾನ ಯೋಜನೆಯಡಿ ಸೀಮಂತ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿ, ಪೋಷನ್ ಟ್ರ್ಯಾಕರ್, ಭಾಗ್ಯಲಕ್ಷ್ಮಿ, ಮಾತೃ ವಂದನ, ಭೇಟಿ ಬಚಾವ್ ಬೇಟಿ ಪಡಾವೊ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ೩೬ ವರ್ಷ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೇವಕಿ ಅವರಿಗೆ ಅಂಗನವಾಡಿ ಕೇಂದ್ರದಲ್ಲಿ ಬೀಳ್ಕೊಡುಗೆ ನೀಡಲಾಯಿತು. ನಂತರ ಪೋಷಣ್ ಅಭಿಯಾನ ಯೋಜನೆಯಡಿ ಸೀಮಂತ ಕಾರ್ಯಕ್ರಮವನ್ನು ಭವ್ಯ ಅವರಿಗೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಳಿಗಿರಿ ಅಂಗನವಾಡಿ ಕಾರ್ಯಕರ್ತೆ ದೇವಕಿ ಹಾಗೂ ಮೇಕೆರಿ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಜರಿದ್ದರು.