

ಕೊಡಗು-ಮೈಸೂರು ಗಡಿಭಾಗದ ಗೇಟ್ ಬಳಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಇರುವ ಸೇತುವೆಯ ಎರಡೂ ಬದಿಗೆ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಯೂನಿಯನ್ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿ 8.75 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗಿದೆ. ರಾಷ್ಟಿçÃಯ ಹೆದ್ದಾರಿ ಇಲಾಖೆ ನಿಗದಿ ಮಾಡಿರುವ ಮಾನದಂಡದ ಅಡಿಯಲ್ಲಿ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿ ಕಾಮಗಾರಿ ನಡೆಸಲಾಗಿದೆ. ಅಲ್ಲಿರುವ ಹಳೇ ಸೇತುವೆಗೂ ಇದೇ ರೀತಿಯಲ್ಲಿ ಜಾಲರಿ ಅಳವಡಿಸಲು ನಿರ್ಧರಿಸಲಾಗಿದ್ದು, ಸಂಬAಧಿಸಿದವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕುಶಾಲನಗರ ಸೇತುವೆಗೆ ಕಬ್ಬಿಣದ ಜಾಲರಿ ಅಳವಡಿಸಿರುವುದು ಉತ್ತಮ ಕಾರ್ಯ. ಸೇತುವೆ ಅಪಾಯಕಾರಿಯಾಗಿ ಇತ್ತು. ಈ ರೀತಿ ಮಾಡಿರುವುದರಿಂದ ಈಗ ಸೇತುವೆ ಮೇಲಿನಿಂದ ಕಸ ಎಸೆಯುವುದು ತಪ್ಪಲಿದೆ. ಈ ಮೂಲಕ ನದಿ ಸ್ವಚ್ಛತೆಗೆ ಪೂರಕ ಕೆಲಸ ಮಾಡಲಾಗಿದೆ. ಅಲ್ಲಿಯ ಹಳೆಯ ಸೇತುವೆಗೂ ಇಂಥದ್ದೇ ಕೆಲಸ ಆಗಬೇಕಿದೆ. ಇದರಿಂದ ನದಿಗೆ ತ್ಯಾಜ್ಯ ಎಸೆಯುವುದು ತಪ್ಪುತ್ತದೆ. ಜತೆಗೆ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳಿಗೂ ಕಡಿವಾಣ ಬೀಳುತ್ತದೆ.
ಕೆಲವರು ಸೇತುವೆ ಮೇಲಿನಿಂದ ಕಸ ಎಸೆಯುವ ಮೂಲಕ ಕಾವೇರಿ ನದಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರು. ಇದನ್ನು ತಡೆಗಟ್ಟಲು ಸೇತುವೆಯ ಎರಡೂ ಬದಿಗೂ ಜಾಲರಿ ಅಳವಡಿಸುವಂತೆ ಕುಶಾಲನಗರ ಪುರಸಭೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಜಾರಿಗೆ ತರುವ ಮೂಲಕ ಪುರಸಭೆಯಿಂದ ಉತ್ತಮ ಕೆಲಸ ಆಗಿದೆ. ನದಿಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸೇತುವೆಗಳಲ್ಲೂ ಇಂಥ ಕೆಲಸ ಆಗಬೇಕಿದೆ.