ದೈವ ಅವಹೇಳನಕ್ಕೆ ತೀವ್ರ ಆಕ್ರೋಶ

ನಾಪೋಕ್ಲು  ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆಯ ಪ್ರಮುಖರು  ದೂರು.
ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆಯ ಪ್ರಮುಖರು ದೂರು.
Published on

ಪ್ರಮುಖ ಮುಖ್ಯಾಂಶಗಳು

  • ಎಮ್ಮೆಮಾಡು ವ್ಯಾಪ್ತಿ
  • ಅನ್ಯ ಧರ್ಮೀಯರಿಂದ ನಡೆದಿದೆ ಎನ್ನಲಾದ ದೈವದ ಅವಹೇಳನ
ನಾಪೋಕ್ಲು: ಸಮೀಪದ ಎಮ್ಮೆಮಾಡು ವ್ಯಾಪ್ತಿಯಲ್ಲಿ ಅನ್ಯ ಧರ್ಮೀಯರಿಂದ ನಡೆದಿದೆ ಎನ್ನಲಾದ ದೈವದ ಅವಹೇಳನ ಪ್ರಕರಣಕ್ಕೆ ಜಿಲ್ಲಾದ್ಯಂತ ತೀವ್ರ ಆಕೋಶ ವ್ಯಕ್ತವಾಗಿದೆ.
ಮದುವೆ ಕಾರ್ಯಕ್ರಮವೊಂದರಲ್ಲಿ ವರನನ್ನು ತಮಾಷೆ ಮಾಡುವ ಭರದಲ್ಲಿ ದೈವವನ್ನು ಅವಹೇಳನ ಮಾಡಿದ ರೀತಿಯಲ್ಲಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹಿಂದೂಪರ ಸಂಘಟನೆಗಳು ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿವೆ. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕೊಡಗು ಎಸ್‌ಪಿ ಬಿಂದುಮಣಿ ಮಾಹಿತಿ ನೀಡಿದ್ದಾರೆ.
ಮತ್ತೊಂದು ಕಡೆ ತೀವ್ರ ಆಕ್ರೋಶಕ್ಕೆ ಒಳಗಾಗಿರುವ ವಿಡಿಯೋದಲ್ಲಿದ್ದ ಯುವಕರು ಘಟನೆ ಬಗ್ಗೆ ಕ್ಷಮಾಪಣೆ ಕೇಳಿ ಮತ್ತೊಂದು ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net