ವಿಮೆ ಹಣದ ಚೆಕ್ ಹಸ್ತಾಂತರ

ಅಕಾಲಿಕ ಮರಣ ಹೊಂದಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗುಡ್ಡೆಹೊಸೂರು ಶಾಖೆ ಗ್ರಾಹಕರ ನಾಮನಿರ್ದೇಶನ ವ್ಯಕ್ತಿಗಳಿಗೆ ವಿಮೆ ಹಣ ಚೆಕ್ ಹಸ್ತಾಂತರ ಮಾಡಲಾಯಿತು. ಉದಯ್ ಕುಮಾರ್, ಸಿ.ಎಂ. ರಾಕೇಶ್, ಕುಮಾರಸ್ವಾಮಿ, ಮೊಹಮ್ಮದ್ ನಭಿ, ಹರೀಶ್, ಯತೀಶ್, ರುದ್ರೇಶ್ ಇದ್ದರು.
ಅಕಾಲಿಕ ಮರಣ ಹೊಂದಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗುಡ್ಡೆಹೊಸೂರು ಶಾಖೆ ಗ್ರಾಹಕರ ನಾಮನಿರ್ದೇಶನ ವ್ಯಕ್ತಿಗಳಿಗೆ ವಿಮೆ ಹಣ ಚೆಕ್ ಹಸ್ತಾಂತರ ಮಾಡಲಾಯಿತು. ಉದಯ್ ಕುಮಾರ್, ಸಿ.ಎಂ. ರಾಕೇಶ್, ಕುಮಾರಸ್ವಾಮಿ, ಮೊಹಮ್ಮದ್ ನಭಿ, ಹರೀಶ್, ಯತೀಶ್, ರುದ್ರೇಶ್ ಇದ್ದರು.
Published on
ಮಡಿಕೇರಿ:
ಬ್ಯಾಂಕ್‌ನಲ್ಲಿ ದೊರೆಯುವ ವಿಮೆ ಸೌಲಭ್ಯಗಳನ್ನು ಪ್ರತಿಯೊಬ್ಬ ಗ್ರಾಹಕರು ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ವಲಯದ ವ್ಯವಸ್ಥಾಪಕ ಉದಯ್ ಕುಮಾರ್ ಹೇಳಿದರು. ಕುಶಾಲನಗರ ತಾಲೂಕು ಗುಡ್ಡೆಹೊಸೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಮೆ ಹಣ ಚೆಕ್ ಹಸ್ತಾಂತರ ಮಾಡಿ ಮಾತನಾಡಿದರು.
ಕಷ್ಟದಲ್ಲಿ ಇರುವ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ವಿಮೆ ಯೋಜನೆಗಳು ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮೆ ಸೌಲಭ್ಯಗಳು ಹಾಗೂ ಅಟಲ್ ಪಿಂಚಣಿ ಯೋಜನೆ ಎಂಬ ಹಲವಾರು ಯೋಜನೆಗಳ ಗ್ರಾಮೀಣ ಬ್ಯಾಂಕಿನಲ್ಲಿ ಇವೆ. ಇವುಗಳ ನೋಂದಣಿಗಾಗಿ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಎಲ್ಲಾ ಸೌಲಭ್ಯಗಳು ಜನರ ಅನುಕೂಲಕ್ಕೆ ಬಳಕೆಯಾಗುತ್ತವೆ ಎಂದರು.
ಗುಡ್ಡೆಹೊಸರು ಶಾಖೆಯ ವ್ಯವಸ್ಥಾಪಕ ಸಿ.ಎಂ. ರಾಕೇಶ್ ಮಾತನಾಡಿ, ಅತೀ ಕಡಿಮೆ ಮೊತ್ತದ ವಿಮೆ ಸೌಲಭ್ಯಗಳನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ಆಧಾರಿತ ಕುಟುಂಬಕ್ಕೆ ಭರವಸೆಯಾಗಿರಬೇಕು. ಪಿಎಂಜೆಜೆಬಿವೈ ವರ್ಷಕ್ಕೆ ರೂ.436 ಮತ್ತು ಪಿಎಂಎಸ್ಬಿವೈ ವರ್ಷಕ್ಕೆ ರೂ.20 ಕಟ್ಟುವ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ನಮ್ಮ ಶಾಖೆಯಲ್ಲಿ ವಿಮೆ ನೋಂದಣಿ ಮಾಡಿಸಿದ್ದ ಇಬ್ಬರು ಗ್ರಾಹಕರು ಅಕಾಲಿಕ ಮೃತಪಟ್ಟ ಹಿನ್ನೆಲೆ ಅವರ ನಾಮನಿರ್ದೇಶನ ವ್ಯಕ್ತಿಗೆ ವಿಮೆ ಹಣವನ್ನು ನೀಡಲಾಗಿದೆ ಎಂದರು.
ಶಾಖೆಯ ಗ್ರಾಹಕರರಾದ ಲೋಹಿತ್ ಮತ್ತು ಪಾರ್ವತಿ ಎಂಬುವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆ ಅವರ ನಾಮನಿರ್ದೇಶನ ವ್ಯಕ್ತಿಗಳಿಗೆ ತಲಾ ಎರಡು ಲಕ್ಷ ರೂಪಾಯಿ ಚೆಕ್ ಅನ್ನು ಇದೇ ಸಂದರ್ಭ ಹಸ್ತಾಂತರ ಮಾಡಲಾಯಿತು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರಸ್ವಾಮಿ, ಎಫ್.ಎಲ್.ಸಿ ಕೋ-ಆರ್ಡಿನೇಟರ್ ಮೊಹಮ್ಮದ್ ನಭಿ, ಹರೀಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಯತೀಶ್, ಬ್ಯಾಂಕ್ ಸಿಬ್ಬಂದಿ ರುದ್ರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net