ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರ ಗೊಂದಿ ಬಸವನಹಳ್ಳಿ ದೇವಸ್ಥಾನದ ಕಮಾನು ಉದ್ಘಾಟನೆ ನೆರವೇರಿಸಿದರು. ಪ್ರಮೋದ್ ಮುತ್ತಪ್ಪ, ಗಿರೀಶ್, ಅರ್ಬಸ್ ಅಹಮದ್, ಜೋಸೆಫ್ ವಿಕ್ಟರ್ ಸೋನ್ಸ್, ಮಂಜುನಾಥ್ ಗುಂಡೂರಾವ್, ಜಿ.ಆರ್. ಪುಷ್ಪಲತಾ ಮತ್ತಿತರರು ಇದ್ದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರ ಗೊಂದಿ ಬಸವನಹಳ್ಳಿ ದೇವಸ್ಥಾನದ ಕಮಾನು ಉದ್ಘಾಟನೆ ನೆರವೇರಿಸಿದರು. ಪ್ರಮೋದ್ ಮುತ್ತಪ್ಪ, ಗಿರೀಶ್, ಅರ್ಬಸ್ ಅಹಮದ್, ಜೋಸೆಫ್ ವಿಕ್ಟರ್ ಸೋನ್ಸ್, ಮಂಜುನಾಥ್ ಗುಂಡೂರಾವ್, ಜಿ.ಆರ್. ಪುಷ್ಪಲತಾ ಮತ್ತಿತರರು ಇದ್ದರು.
Published on
ಕುಶಾಲನಗರ:
ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಜಿಲ್ಲೆಗೆ 50 ಕೋಟಿ ರೂ. ಅನುದಾನ ಲಭಿಸಿದ್ದು ಅದರಲ್ಲಿ ಕುಶಾಲನಗರ ಪಟ್ಟಣದ ಅಭಿವೃದ್ಧಿ ಕಾಮಗಾರಿಗೆ 5.5 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದರು. 2025 -26 ನೇ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಈ ಅನುದಾನದಲ್ಲಿ ಪಟ್ಟಣದ ಸಂಪರ್ಕ ರಸ್ತೆಗಳು ಮತ್ತು ಸುತ್ತಮುತ್ತ ವ್ಯಾಪ್ತಿಯ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಗುತ್ತಿಗೆದಾರರು ಕೂಡ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.
ಕುಶಾಲನಗರ ಪುರಸಭೆ ವ್ಯಾಪ್ತಿಯ ಸೋಮೇಶ್ವರ ದೇವಾಲಯದಿಂದ ಗುಂಡೂರಾವ್ ಬಡಾವಣೆಯ ತನಕದ 1 ಕೋಟಿ ರೂ. ವೆಚ್ಚದ ಸಂಪರ್ಕ ರಸ್ತೆ, ಕುಶಾಲನಗರ ಗೊಂದಿ ಬಸವನಹಳ್ಳಿ ದೇವಸ್ಥಾನದ ಕಮಾನು ಉದ್ಘಾಟನೆ, ಪುರಸಭೆ ವ್ಯಾಪ್ತಿಯ ಸಾಯಿ ಆಸ್ಪತ್ರೆಯ ಮುಂಭಾಗದ ರಸ್ತೆ ಅಭಿವೃದ್ಧಿ, ಕರಿಯಪ್ಪ ಬಡಾವಣೆಯ ರಸ್ತೆ ಕಾಮಗಾರಿ, ಹಿಂದೂ ರುದ್ರಭೂಮಿಗೆ ತೆರಳುವ ರಸ್ತೆ ಅಭಿವೃದ್ಧಿ, ಹೌಸಿಂಗ್ ಬೋರ್ಡ್ ತೆರಳುವ ರಸ್ತೆ ಕಾಮಗಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒತ್ತಿನಲ್ಲಿರುವ ಚರ್ಚ್ಗೆ ತೆರಳುವ ಮಾರ್ಗ, ಉರ್ದು ಶಾಲೆ ಬಳಿ ರಸ್ತೆಯ ಅಭಿವೃದ್ಧಿ ಸೇರಿದಂತೆ ಸುಮಾರು 11 ಕಡೆ ಶಾಸಕರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್, ಎಂಜಿನಿಯರ್ ಅರ್ಬಸ್ ಅಹಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಕ್ಷದ ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಜಿ.ಆರ್. ಪುಷ್ಪಲತಾ, ಪ್ರಕಾಶ್, ಸಜಿ, ಜಗದೀಶ್, ವಿ.ಎಸ್. ಆನಂದ್ ಕುಮಾರ್, ಗೋವಿಂದಪ್ಪ, ಹರೀಶ್, ಎಂ.ಕೆ. ದಿನೇಶ್, ಕೆ.ಎನ್. ಅಶೋಕ್, ನಂಜುAಡಸ್ವಾಮಿ, ಜಯಲಕ್ಷ್ಮಮ್ಮ, ವಿ.ಪಿ. ಸುಕೇಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net