ಪೊನ್ನಂಪೇಟೆ ತಾಲೂಕು ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಮಂಗಳವಾರ ಮನೆಯ ಗೋಡೆ ಕುಸಿದು ಕುದನೆಕೊಡಿರ ಮಣಿ ಬೆಳ್ಳಿಯಪ್ಪ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಣಿ ಅವರ ತಾಯಿ ಭೋಜಮ್ಮ ವಾಸವಿರುವ ಮನೆಯ ಹತ್ತಿರ ಹೋಗುತ್ತಿದ್ದ ಸಂದರ್ಭದಲ್ಲಿ ಆ ಮನೆಯ ಗೋಡೆ ಕುಸಿದಿದೆ. ಇದರಡಿಯಲ್ಲಿ ಸಿಲುಕಿದ್ದ ಮಣಿ ಬೆಳ್ಳಿಯಪ್ಪ ಅವರನ್ನು ಅಕ್ಕಪಕ್ಕದವರು ಸೇರಿ ರಕ್ಷಿಸಿದ್ದಾರೆ. ತಲೆ ಮತ್ತು ಕಾಲಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿರುವ ಮಣಿ ಅವರನ್ನು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.