ಸೋಮವಾರಪೇಟೆಯಲ್ಲಿ ಇಂದಿರಾ ಗಾಂಧಿ ಜಯಂತಿ

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಇಂದಿರಾ ಗಾಂಧಿ ಜನ್ಮ ದಿನವನ್ನು ಆಚರಿಸಲಾಯಿತು. ಸತೀಶ್, ಆದಂ, ಶೀಲಾ ಡಿಸೋಜ, ಬಸವರಾಜು ಇತರರು ಇದ್ದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಇಂದಿರಾ ಗಾಂಧಿ ಜನ್ಮ ದಿನವನ್ನು ಆಚರಿಸಲಾಯಿತು. ಸತೀಶ್, ಆದಂ, ಶೀಲಾ ಡಿಸೋಜ, ಬಸವರಾಜು ಇತರರು ಇದ್ದರು.
Published on
ಸೋಮವಾರಪೇಟೆ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜನ್ಮ ದಿನವನ್ನು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಬುಧವಾರ ಆಚರಿಸಲಾಯಿತು.

ಇಂದಿರಾ ಗಾಂಧಿ ಭಾವಚಿತ್ರಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಪುಷ್ಪಾರ್ಚನೆ ನಡೆಸಿ ಮಾತನಾಡಿ, ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಹಾಗು ದೇಶದ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವಿ ನಾಯಕಿಯರಲ್ಲಿ ಒಬ್ಬರಾದ ಇಂದಿರಾ ಗಾಂಧಿಯವರ ಸೇವೆ ಹಾಗೂ ಅವರು ತೆಗೆದುಕೊಳ್ಳುತಿದ್ದ ನಿರ್ಧಾರಗಳಿಂದ ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು. ಇಂದಿರಾ ಗಾಂಧಿಯವರು ಮೊದಲ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ನಿರ್ಣಾಯಕ ನಾಯಕತ್ವ ನೀಡಿದರು. ದೇಶದ ಕೃಷಿ ಉತ್ಪಾದನೆ ಹೆಚ್ಚಿಸಿದ ಹಸಿರು ಕ್ರಾಂತಿ, ಬ್ಯಾಂಕ್‌ಗಳು ಹಾಗೂ ಪ್ರಮುಖ ಕೈಗಾರಿಕೆಗಳ ರಾಷ್ಟ್ರೀಕರಣ, ಬಲಿಷ್ಠ ವಿದೇಶಾಂಗ ನೀತಿಗಳು ಅವರ ಆಡಳಿತಾವಧಿಯ ಪ್ರಮುಖ ಘಟ್ಟಗಳು ಎಂದರು.

ಮುಖಂಡರಾದ ಕೆ.ಎ.ಆದಮ್, ಎಚ್.ಸಿ.ನಾಗೇಶ್, ಬಿ.ಎನ್.ಬಸವರಾಜು, ಶೀಲಾ ಡಿಸೋಜ, ಎಂ.ಎ.ರುಬಿನಾ, ಬಿ. ಸಿ.ವೆಂಕಟೇಶ್, ಇಂದ್ರೇಶ್, ಮಹಮ್ಮದ್ ಬೇಟು, ಭುವನೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net