ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಮಡಿಕೇರಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಎಸ್. ಜಾನಕಿ ಗಾನ ನಮನ ಹಾಗೂ ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ. ಅನಿಲ್ ಉದ್ಘಾಟಿಸಿದರು. ಬಿ.ಜಿ. ಅನಂತಶಯನ, ಅಂಬೆಕಲ್ ನವೀನ್ ಕುಶಾಲಪ್ಪ, ಮೂಟೇರ ಪುಪ್ಪಾವತಿ ರಮೇಶ್, ಕೆ. ಜಯಲಕ್ಷಿö್ಮÃ, ಮೋಹನ್ ಕುಮಾರ್ ಮತ್ತಿತರರು ಇದ್ದರು.
ಭಾರತದ ಮೇರು ಕಲಾವಿದೆಯಾಗಿದ್ದ ಎಸ್. ಜಾನಕಿ ಕೆಲವೇ ವರ್ಷಗಳಿಗೆ ಸಂದ ಗಾಯಕಿಯಾಗಿರದೇ ಮನಸೆಳೆಯುವ ಹಾಡುಗಳ ಮೂಲಕ ಸಾರ್ವಕಾಲಿಕವಾಗಿ ಸಲ್ಲುವ ನಾಡಿನ ಹೆಮ್ಮೆಯ ಗಾಯಕಿ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ. ಅನಿಲ್ ಹೇಳಿದರು. ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಮಡಿಕೇರಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಎಸ್. ಜಾನಕಿ ಗಾನ ನಮನ ಹಾಗೂ ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್. ಜಾನಕಿ ದೈಹಿಕವಾಗಿ ಕಣ್ಮರೆಯಾಗಿದ್ದರೂ ಕಲಾವಿದರ ಹಾಡುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ನಗರದ ಲಯನ್ಸ್ ಸಬಾಂಗಣದಲ್ಲಿ. 66 ವರ್ಷಗಳ ಸುಧೀರ್ಘ ಕಾಲ ತನ್ನ ಹಾಡುಗಳ ಮಾಧುರ್ಯದ ಮೂಲಕ ಕಲಾಸೇವೆಯಲ್ಲಿ ತೊಡಗಿದ್ದು ಸಾಮಾನ್ಯ ಸಾಧನೆಯಲ್ಲ. ಸಂಗೀತ ಎಂಬುದು ಎಸ್. ಜಾನಕಿಯವರೆಗೆ ದೇವರು ಕೊಟ್ಟ ವರವಾಗಿತ್ತು. ಹಾಡುಗಾರರಿಗೆ ಸರ್ಕಾರ ತಾರತಮ್ಯ ಧೋರಣೆ ಮಾಡಿದ್ದನ್ನು ವಿರೋಧಿಸಿದ್ದ ಜಾನಕಿ 3 ವರ್ಷ ಕನ್ನಡದಲ್ಲಿ ಹಾಡಲೇ ಇಲ್ಲ. ಇವರ ಮೌನ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಹಿನ್ನಲೆ ಗಾಯಕರಿಗೆ ರಾಜ್ಯ ಪ್ರಶಸ್ತಿ ನೀಡುವಂತಾಯಿತು. ಆಕಾಶ ದೀಪವು ನೀನು ಎಂದು ಹಾಡಿದ್ದ ಜಾನಕಿ, ನಿಜವಾದ ಅರ್ಥದಲ್ಲಿಯೂ ಸಿನಿಮಾ ಕಲಾವಿದರ ಪಾಲಿಗೆ ಸಾಧನೆಗೆ ಕಾರಣವಾಗುವ ಪ್ರಜ್ವಲ ದೀಪವಾಗಿದ್ದರು.
ಯುವಕ, ಯುವತಿಯರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ 8 ವರ್ಷಗಳಿಂದ ಸಮರ್ಥ ಕನ್ನಡಿಗರು ಸಂಸ್ಥೆ ಶ್ಲಾಘನೀಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಂಥ ಸಂಸ್ಥೆಗಳಿರುವುದರಿAದಲೇ ಕೊಡಗಿನಲ್ಲಿ ಸಾಂರ್ಸ್ಕತಿಕ ಲೋಕ ಶ್ರೀಮಂತವಾಗಿದೆ. ರೀಲ್ಸ್, ಮೊಬೈಲ್ ನಲ್ಲಿ ಮುಳುಗಿರುವ ಯುವಪೀಳಿಗೆ ದೇಶಪ್ರೇಮ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಅಣ್ವಸ್ತ್ರಗಳಿಗಿಂತ ನಮ್ಮಲ್ಲಿರುವ ಧ್ವನಿ ಮಾತುಗಳೇ ಪ್ರಬಲವಾದ ಅಸ್ತ್ರವಾಗಿದೆ. ಇದನ್ನು ಅಗತ್ಯವಿದ್ದಲ್ಲಿ ಸೂಕ್ತರೀತಿಯಲ್ಲಿ ಬಳಸಿಕೊಂಡಾಗ ಯಾವುದೇ ಗುರಿ ಸಾಧಿಸಬಹುದಾಗಿದೆ. ಶಸ್ತ್ರಾಸ್ತ್ರಗಳು ಕೊಲ್ಲಲು ಬಳಸಲ್ಪಟ್ಟರೆ, ಭರವಸೆಯ ಮಾತುಗಳು ಬದುಕಿಸುವ ಶಕ್ತಿ ಹೊಂದಿದೆ. ಹಾಡುಗಳು ನಮ್ಮನ್ನು ಭಾವಪರವಶವಾಗಿಸುವ ಶಕ್ತಿಯನ್ನು ಹೊಂದಿದ್ದು, ಗಾಯನ ಕಲೆಯನ್ನು ಮಕ್ಕಳು ಅಭ್ಯಾಸದ ಮೂಲಕ ಸಿದ್ದಿಸಿಕೊಳ್ಳಬೇಕೆಂದರು.
ಮ್ತಡಿಕೇರಿ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, 8 ವರ್ಷಗಳಿಂದ ಪ್ರತಿಭಾವಂತರನ್ನು ಬೆಳಕಿಗೆ ತರುವ ಉದ್ದೇಶದಿಂದ ಸಮರ್ಥ ಕನ್ನಡಿಗರು ಸಂಸ್ಥೆ ಗಮನಾರ್ಹ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಮಡಿಕೇರಿ ಏಲಕ್ಕಿ ಮಾರಾಟಗಾರರ ಸಂಘದ ನಿರ್ದೇಶಕಿ ಮೂಟೇರ ಪುಪ್ಪಾವತಿ ರಮೇಶ್ ಮಾತನಾಡಿ, ಕನ್ನಡ ನಾಡು ನುಡಿಯ ಮಹತ್ವ ತಿಳಿಸಲು ಇಂಥ ಪ್ರತಿಭಾ ಸಂಗಮ ಅತ್ಯಗತ್ಯವಾಗಿದೆ. ನೂರಾರು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷಿö್ಮÃ ಮಾತನಾಡಿ, ಪೋಷಕರನ್ನು ಪ್ರೋತ್ಸಾಹಿಸಿ ಮಕ್ಕಳಲ್ಲಿ ದೇಶಪ್ರೇಮದ ಭಾವನೆ ಹೆಚ್ಚಿಸಲು ಸಂಸ್ಥೆಯಿAದ ನಮ್ಮ ದೇಶ - ನಮ್ಮ ಹೆಮ್ಮೆ ಎಂಬ ಭಾಷಣ ಸಮೂಹಗಾಯನ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರೇ ಸಂಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿದ್ದು, ಪೋಷಕರ ಬೆಂಬಲ ಅತ್ಯಗತ್ಯ ಎಂದು ಹೇಳಿದರು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್, ಸೌಮ್ಯ ಸಂತೋಷ್ ಭಟ್, ಪವಿತ್ರಾ ಸಂತೋಷ್, ಅನಿತಾ ಧನಂಜಯ್, ವಿ. ಅಂಬಿಕಾ ಇದ್ದರು.