ನೂತನ ಟರ್ಫ್ ಮೈದಾನ ಉದ್ಘಾಟನೆ

ಗೋಣಿಕೊಪ್ಪಲುವಿನಲ್ಲಿ ನೂತನ ಟರ್ಫ್ ಮೈದಾನವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಕುಲ್ಲಚಂಡ ಪ್ರಮೋದ್ ಗಣಪತಿ, ಮಂಜುಳಾ, ವಿ.ಪಿ. ಶಶಿಧರ್, ಅಜಿತ್ ಅಯ್ಯಪ್ಪ, ಖಾಲಿದ್, ಸಮದ್ ಮತ್ತಿತರರು ಇದ್ದರು.
ಗೋಣಿಕೊಪ್ಪಲುವಿನಲ್ಲಿ ನೂತನ ಟರ್ಫ್ ಮೈದಾನವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಕುಲ್ಲಚಂಡ ಪ್ರಮೋದ್ ಗಣಪತಿ, ಮಂಜುಳಾ, ವಿ.ಪಿ. ಶಶಿಧರ್, ಅಜಿತ್ ಅಯ್ಯಪ್ಪ, ಖಾಲಿದ್, ಸಮದ್ ಮತ್ತಿತರರು ಇದ್ದರು.
Published on
ಪೊನ್ನಂಪೇಟೆ:
ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಟರ್ಫ್ ಮೈದಾನವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಶನಿವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆಯನ್ನು ಪ್ರೋತ್ಸಾಹಿಸುವುದು ಸರ್ಕಾರದ ಜತೆಗೆ ತಮ್ಮ ಕರ್ತವ್ಯವೂ ಆಗಿದ್ದು, ಕೊಡಗಿನ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಮುಖ್ಯ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಕೊಡಗು ಜಿಲ್ಲೆಯಲ್ಲಿ ಉತ್ತಮ ಮೂಲಸೌಕರ್ಯಗಳ ಅಗತ್ಯವಿದೆ. ಸೂಕ್ತ ಸೌಲಭ್ಯಗಳನ್ನು ಒದಗಿಸಿದಲ್ಲಿ ಇನ್ನಷ್ಟು ಯುವ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು. ತಮ್ಮ ಅವಧಿಯಲ್ಲಿ ಕ್ರೀಡೆಗೆ ನೀಡಿದ ಅನುದಾನಗಳ ಕುರಿತು ಮಾಹಿತಿ ಹಂಚಿಕೊAಡ ಶಾಸಕರು, ಈ ನೂತನ ಟರ್ಫ್ ಮೈದಾನವನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಯುವಜನತೆಗೆ ಕರೆ ನೀಡಿದರು. ಮೈದಾನದ ನಿರ್ಮಾಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಮಂಜುಳಾ, ವಿ.ಪಿ. ಶಶಿಧರ್, ಅಜಿತ್ ಅಯ್ಯಪ್ಪ, ಖಾಲಿದ್, ಸಮದ್, ರಾಜಶೇಖರ್, ತೆರೇಸಾ ವಿಕ್ಟರ್, ಅಜ್ಜಿಕುಟ್ಟಿರ ಪೊನ್ನು, ವಿ.ಟಿ. ವಾಸು, ನಾಯಂದಿರ ಶಿವಾಜಿ, ಬಶೀರ್, ಅಬ್ದುಲ್ ರೆಹಮಾನ್, ಶರತ್, ಜಮ್ಮಡ ಸೋಮಣ್ಣ, ಅಂಕಿತ್ ಪೊನ್ನಪ್ಪ, ಸರ್ಫು, ಮಹಾದೇವ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net