ಹಿರಿಯರು ನೀಡಿದ ಜಾನಪದ ಕೊಡವ ಭಾಷೆ, ಜನಾಂಗಕ್ಕೆ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ. ಜಾನಪದವನ್ನು ಉಳಿಸಿಕೊಂಡು ಕೊಡವಾಮೆಯನ್ನು ಪೋಷಿಸುವ ಕಾರ್ಯ ಮುಖ್ಯ. ಹಿಂದೆ ಕಡಿಮೆ ಶಿಕ್ಷಣ ಇದ್ದರೂ ಕೂಡ ನೀಡಿದ ಪದ ಬಳಕೆ, ಪಟ್ಟೋಲೆ ಪಳಮೆ, ಬಾಳೋಪಾಟ್, ಪೊಲ್ಚಿ ಪಾಟ್, ಮಂಗಲ ಪಾಟ್, ದೇವಡ ಪಾಟ್, ದೇವಮಕ್ಕ ದೇಬುವ ಪಾಟ್ ಅಷ್ಟೊಂದು ಅರ್ಥ ಗರ್ಭಿತ ಮತ್ತು ಹಿನ್ನೆಲೆ ಆಚರಣೆಗೆ ಮೂಲವಾಗಿದೆ. ಇಂತಹ ಜ್ಞಾನವನ್ನು ಯಾವ ಶಿಕ್ಷಣ ಕೂಡ ನೀಡಲು ಸಾಧ್ಯವಿಲ್ಲ. ಬಾಳೋಪಾಟ್ ಹಿಂದಿನ ಕಾಲದ ಕೊಡವರ ಬಾಯಲ್ಲಿ ಹಾಡಿನ ರೂಪದಲ್ಲಿ ಬರುತ್ತಿತ್ತು. ನಂತರದ ವರ್ಷಗಳಲ್ಲಿ ಸಿನಿಮಾ ಹಾಡು ಗುನುಗುವಂತಾಗಿದೆ. ಆದರೆ, ಬಾಳೋಪಾಟ್‌ನಲ್ಲಿರುವ ಸಾಲುಗಳು ನಮ್ಮ ಬದುಕಿಗೆ ಸನ್ಮಾರ್ಗ ಎಂಬ ಅರಿವು ಮುಖ್ಯವಾಗಿದೆ.