ಪೊನ್ನಂಪೇಟೆಯಲ್ಲಿ ಪುಸ್ತಕ ಪತ್ತಾಯ ಉದ್ಘಾಟನೆ

ಪೊನ್ನಂಪೇಟೆ ಎಂಜಿನಿಯರಿAಗ್ ಕಾಲೇಜಿನ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿಯ 15ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೊನ್ನಂಪೇಟೆ ಎಂಜಿನಿಯರಿAಗ್ ಕಾಲೇಜಿನ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿಯ 15ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Published on
ಗೋಣಿಕೊಪ್ಪಲು:
ಮಕ್ಕಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಾಠ ಪುಸ್ತಕಕ್ಕೆ ಒತ್ತು ಕೊಡುವುದರ ಜತೆಯಲ್ಲಿ ಕಥೆ-ಸಾಹಿತ್ಯದ ವಿಚಾರವಾಗಿ ಒಲವು ತೋರುವುದರಿಂದ ಮುಂದಿನ ದಿನಗಳಲ್ಲಿ ಸಾಹಿತ್ಯಪರ ಚಿಂತನೆಗೆ ಅನುಕೂಲವಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಕೊಡವ ಸಾಹಿತ್ಯ ಅಕಾಡೆಮಿಯ 15ನೇ ಕೊಡವ ಪುಸ್ತಕ ಪತ್ತಾಯವನ್ನು ಪೊನ್ನಂಪೇಟೆ ಎಂಜಿನಿಯರಿAಗ್ ಕಾಲೇಜಿನ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಪ್ರತಿಯೊಂದು ಪ್ರದೇಶಕ್ಕೆ ಅದರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಪ್ರಾದೇಶಿಕ ಭಿನ್ನತೆ ಇದೆ. ಬಹುಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಹಲವು ಜಾತಿ-ಜನಾಂಗಗಳು, ಭಾಷೆ-ಸಂಸ್ಕೃತಿ ಇದ್ದು ಶಾಂತಿ-ಸೌಹಾರ್ದತೆ, ಸಹೋದರತೆಯಿಂದ ಬಾಳಿ ಬದುಕುತ್ತಿರುವುದು ಈ ಮಣ್ಣಿನ ಸುಸಂಸ್ಕೃತಿ ಆಗಿದೆ. ಮಕ್ಕಳು ಚಿಕ್ಕಂದಿನಿAದಲೇ ಆಯಾಯ ಪ್ರದೇಶಗಳ ಸಾಂಸ್ಕೃತಿಕ ಹಿನ್ನೆಲೆ, ಭಾಷೆಯ ವೈಶಿಷ್ಟö್ಯತೆಗಳನ್ನು ಅರಿತುಕೊಳ್ಳಬೇಕು. ಇದಕ್ಕೆ ಅನುಕೂಲವಾಗುವಂತೆ ಕೊಡವ ಅಕಾಡೆಮಿಯಿಂದ ಕೊಡವ ಪುಸ್ತಕ ಪತ್ತಾಯ ಯೋಜನೆಯನ್ನು ಜಾರಿಗೆ ತಂದಿದ್ದು, ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಾನಿ ಡಾ. ಮಚ್ಚರಂಡ ಮಾದಪ್ಪ ಉತ್ತಪ್ಪ, ಪುಸ್ತಕಗಳು ನಮ್ಮೆಲ್ಲರ ಗೆಳೆಯನಿದ್ದಂತೆ. ಅವುಗಳು ನಮ್ಮ ಅಜ್ಞಾನಕ್ಕೆ ಸ್ಪಷ್ಟವಾದ ಉತ್ತರಗಳನ್ನು ಕೊಡುತ್ತದೆ ಹೊರತು ಹೀಯಾಳಿಸುವುದಿಲ್ಲ. ನಮ್ಮೆಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವವನೇ ಮಿತ್ರನಾದ ಪುಸ್ತಕ. ಮಕ್ಕಳು ಪುಸ್ತಕಗಳನ್ನು ತಮ್ಮ ಬಾಲ್ಯದ ಗೆಳೆಯನಾಗಿಸಿಕೊಂಡಲ್ಲಿ ಜ್ಞಾನದ ಸಂಪತ್ತು ತುಂಬಿ ಬರುವುದು. ಕೊಡಗಿನ ಸಾಂಸ್ಕೃತಿಕ ಅಸ್ಮಿತೆಯನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಾರಂಭಿಸಿರುವ ಪುಸ್ತಕ ಪತ್ತಾಯ ಒಂದು ಒಳ್ಳೆಯ ಯೋಜನೆಯಾಗಿದೆ ಎಂದು ಹೇಳಿದರು.
ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಎಂಬುವುದು ಕೇವಲ ಉಡುಗೆ ತೊಡುಗೆಗಳಿಗೆ ಸೀಮಿತವಾದಂತದಲ್ಲ. ಹಿರಿಯರಿಗೆ, ಗುರುಗಳಿಗೆ, ತಂದೆ-ತಾಯAದಿರಿಗೆ ಗೌರವ ಕೊಟ್ಟು ನಡೆಯುವುದು, ಕಷ್ಟದಲ್ಲಿರುವ ಯಾರೇ ಇರಲಿ ಸಹಾಯ ಮಾಡುವುದು, ವಿದ್ಯಾವಂತನಾಗಿ ಸಮಾಜಕ್ಕೆ ಒಳಿತನ್ನು ಮಾಡುವುದು ನಿಜವಾದ ಕೊಡವ ಸಂಸ್ಕೃತಿ ಆಗಿದೆ. ಮಕ್ಕಳು ಅಂಕಗಳ ಲೆಕ್ಕಾಚಾರದಲ್ಲಿ ಪಾಠ ಪುಸ್ತಕದ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸಿದರೆ ಸಾಲದು, ಬಿಡುವು ಮಾಡಿಕೊಂಡು ಕಾದಂಬರಿಗಳ ಓದಿಗೆ ಸಮಯ ಮೀಸಲಿಡುವುದರಿಂದ ಬದುಕಿನ ಅರ್ಥ ತಿಳಿಯಲು ಅನುಕೂಲ ಆಗುತ್ತದೆ ಎಂದರು.
ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿ ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಣ್ಣುವಂಡ ರೋಜಿಣಿ ತಿಮ್ಮಯ್ಯ, ಉಪನ್ಯಾಸಕಿ ಕಳ್ಳೆಂಗಡ ಸ್ಫೂರ್ತಿ ಕಾವೇರಮ್ಮ, ಸಾಹಿತ್ಯಾಭಿಮಾನಿ ಅಪ್ಪನೆರವಂಡ ಮನೋಜ್ ಮಂದಪ್ಪ, ಅಕಾಡೆಮಿಯ ಸದಸ್ಯರುಗಳಾದ ಪೊನ್ನಿರ ಗಗನ್, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಚೆಪ್ಪುಡಿರ ಉತ್ತಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net