ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆಯ ಇಂರ‍್ಯಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಜಗದೀಶ್ ಪ್ರಶಾಂತ್, ಬಿ.ಜಿ. ಅನಂತಶಯನ, ಸುಧೀರ್, ಸತ್ಯ ಸುಲೋಚನ, ರಾಜೇಶ್ ಇದ್ದರು,
Published on:
Copied
Follow Us
ಮಡಿಕೇರಿ:
ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆಯ ಇಂರ‍್ಯಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಈಚೆಗೆ ನಡೆಯಿತು. ಅಧ್ಯಕ್ಷರಾಗಿ ಎ.ಸಿ. ಕಾನಿಷ್ಕ, ಉಪಾಧ್ಯಕ್ಷರಾಗಿ ಎಂ. ಮನನ್, ಕಾರ್ಯದರ್ಶಿಯಾಗಿ ವಿಶ್ರುತ, ಸಹ ಕಾರ್ಯದರ್ಶಿಯಾಗಿ ಸುಚೇತ್, ಖಜಾಂಚಿಯಾಗಿ ಶಿಶಿರ್ ಭಟ್ ಹಾಗೂ ನಿರ್ದೇಶಕರು ಅಧಿಕಾರ ವಹಿಸಿಕೊಂಡರು.
ಅಧಿಕಾರ ಬೋಧನೆ ಮಾಡಿ ಮಾತನಾಡಿದ ಮಿಸ್ಟಿ ಹಿಲ್ಸ್ನ ಮಾಜಿ ಅಧ್ಯಕ್ಷ ಜಗದೀಶ್ ಪ್ರಶಾಂತ್, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಬೆಳವಣಿಗೆ ಮಾಡುವುದೇ ರೋಟರಿ ಸಂಸ್ಥೆಯ ಉದ್ದೇಶ. ಇಂರ‍್ಯಾಕ್ಟ್ ಸಂಸ್ಥೆ ಸೇರುವ ಮೂಲಕ ವಿದ್ಯಾರ್ಥಿಗಳು ಜವಾಬ್ದಾರಿ ಹೆಚ್ಚಿಸಿಕೊಳ್ಳುತ್ತಾರೆ. ದೂರದೃಷ್ಟಿತ್ವ ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಸಾಮಾಜಿಕ ಕಳಕಳಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಇಂರ‍್ಯಾಕ್ಟ್ ಚೇರ್ಮನ್ ಬಿ.ಜಿ. ಅನಂತಶಯನ ಮಾತನಾಡಿ, ಶಾಲೆಯ ಜತೆಗಾರನೊಬ್ಬ ದುಃಖದಿಂದ ಕುಳಿತಿರುವಾಗ ಅವನ ಬೆನ್ನುತಟ್ಟಿ ಮಾತನಾಡಿಸುವುದು ಕೂಡ ಒಂದು ಸೇವೆಯೇ ಆಗಿದೆ. ಸೇವೆಯೊಂದಿಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಶಾಲೆ, ಕುಟುಂಬ ಮತ್ತು ದೇಶಕ್ಕೆ ಗೌರವ ತರುವ ರೀತಿ ಬಾಳಬೇಕೆಂದು ಹೇಳಿದರು.
ಶಾಲಾ ಅಧ್ಯಕ್ಷ ಸುಧೀರ್ ಮಾತನಾಡಿ, ಸೇವಾ ಮನೋಭಾವ ಎಂಬುದು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಬಂದರೆ ಮುಂದೆ ಅವರು ಉತ್ತಮ ನಾಯಕರಾಗಿ ಬೆಳಗುತ್ತಾರೆ ಎಂದರು.
ಪ್ರಾಂಶುಪಾಲೆ ಸತ್ಯ ಸುಲೋಚನ ಮಾತನಾಡಿ, ಅಂತರರಾಷ್ಟಿçÃಯ ಸಂಸ್ಥೆ ರೂಟರಿಯ ಉದ್ದೇಶ ಸ್ವಹಿತ ಮೀರಿದ ಸೇವೆಯಾಗಿದೆ. ಸೇವಾ ಮನೋಭಾವ ಎಂಬುದು ವಿದ್ಯಾರ್ಥಿ ದೆಸೆಯಿಂದ ಕೊನೆತನಕವೂ ಇರಬೇಕು ಎಂದು ಆಶಿಸಿದರು.
ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಮಾತನಾಡಿ, ಇಂರ‍್ಯಾಕ್ಟ್ ಸದಸ್ಯರ ಎಲ್ಲಾ ಚಟುವಟಿಕೆಗಳಿಗೂ ಸಹಕಾರ ನೀಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಡಾ. ಚೇತನ್ ಹಾಗೂ ಸಂಚಾಲಕಿ ವಿನಿತಾ, ವಿದ್ಯಾರ್ಥಿನಿಗಳಾದ ಪುನರ್ವ, ದುವಿತ, ಸಿರೇನಾ ದೇಶಮ್ಮ, ತಾನ್ಯಾ ಜೋಸೆಫ್ ಇದ್ದರು.