ವಿಪ್ರ ಸಭಾ ಭವನ ಉದ್ಘಾಟನಾ ಕಾರ್ಯಕ್ರಮ

ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದಿAದ ಕೈಕೇರಿ ಗ್ರಾಮದಲ್ಲಿ ನಿರ್ಮಿಸಿದ ನೂತನ ವಿಪ್ರ ಸಭಾ ಭವನದ ಲೋಕಾರ್ಪಣಾ ಕಾರ್ಯದಲ್ಲಿ ಕುಂದಾಪುರ ಬಾಳೆ ಕುಂದ್ರು ಶ್ರೀಮಠದ ಗುರು ಜಗದ್ಗುರು ಶಂಕರಾಚಾರ್ಯ ವಾಸುದೇವ ಸದಾಶಿವಾಶ್ರಮ ಸ್ವಾಮಿ ಮಾತನಾಡಿದರು. ಸುಜಾ ಕುಶಾಲಪ್ಪ, ರಾಘವೇಂದ್ರ ವೈಲಾಯ, ಸುದರ್ಶನ್ ಕೆದಿಲಾಯ, ಮೋಹನ್ ನಲ್ಲೂರಾಯ ಮತ್ತಿತರರು ಇದ್ದರು.
ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದಿAದ ಕೈಕೇರಿ ಗ್ರಾಮದಲ್ಲಿ ನಿರ್ಮಿಸಿದ ನೂತನ ವಿಪ್ರ ಸಭಾ ಭವನದ ಲೋಕಾರ್ಪಣಾ ಕಾರ್ಯದಲ್ಲಿ ಕುಂದಾಪುರ ಬಾಳೆ ಕುಂದ್ರು ಶ್ರೀಮಠದ ಗುರು ಜಗದ್ಗುರು ಶಂಕರಾಚಾರ್ಯ ವಾಸುದೇವ ಸದಾಶಿವಾಶ್ರಮ ಸ್ವಾಮಿ ಮಾತನಾಡಿದರು. ಸುಜಾ ಕುಶಾಲಪ್ಪ, ರಾಘವೇಂದ್ರ ವೈಲಾಯ, ಸುದರ್ಶನ್ ಕೆದಿಲಾಯ, ಮೋಹನ್ ನಲ್ಲೂರಾಯ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಭಾರತದ ಸಂಸ್ಕೃತಿ, ಆಚಾರ, ವಿಚಾರ, ವೇದ, ಪುರಾಣ, ಉಪನಿಷತ್ತುಗಳನ್ನು ಉಳಿಸುವ ಕರ್ತವ್ಯದ ಕಡೆ ಬ್ರಾಹ್ಮಣ ಮನಸ್ಸು ಸದಾ ಮಿಡಿಯುತ್ತಿರಬೇಕು ಎಂದು ಕುಂದಾಪುರ ಬಾಳೆ ಕುಂದ್ರು ಶ್ರೀಮಠದ ಗುರು ಜಗದ್ಗುರು ಶಂಕರಾಚಾರ್ಯ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಹೇಳಿದರು. ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘ ಒಂದು ಕೋಟಿ ರೂ. ವೆಚ್ಚದಲ್ಲಿ ಕೈಕೇರಿ ಗ್ರಾಮದಲ್ಲಿ ನಿರ್ಮಿಸಿದ ನೂತನ ವಿಪ್ರ ಸಭಾ ಭವನದ ಲೋಕಾರ್ಪಣಾ ಕಾರ್ಯದಲ್ಲಿ ಭಾಗವಹಿಸಿ ಈಚೆಗೆ ಮಾತನಾಡಿದರು.
ಬ್ರಾಹ್ಮಣರ ಧರ್ಮ ಮನುಕುಲದಲ್ಲಿಯೇ ಶ್ರೇಷ್ಠತೆಯನ್ನು ಹೊಂದಿದೆ. ಪ್ರತಿಯೊಂದು ಜೀವಿಗಳ ಜನುಮದ ನಂತರ ಬ್ರಾಹ್ಮಣ ಜನ್ಮ ಹುಟ್ಟಿಕೊಳ್ಳುತ್ತದೆ. ಬ್ರಾಹ್ಮಣರು ಬ್ರಹ್ಮಜ್ಞಾನಿಗಳಾಗಿರುವುದರಿಂದಲೇ ಇತರ ಸಮುದಾಯವರು ಪೂಜನೀಯ ಭಾವನೆಯಲ್ಲಿ ನೋಡುತ್ತಾರೆ. ಹೀಗಾಗಿ ಬ್ರಾಹ್ಮಣರು ತಮ್ಮ ಭಾವನೆಗಳನ್ನು ಬದಿಗಿಟ್ಟು ತ್ಯಾಗದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಬ್ರಾಹ್ಮಣತ್ವವನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕು. ಬ್ರಾಹ್ಮಣತ್ವ ಉಳಿದುಕೊಂಡಾಗ ಭಾರತದ ಸಂಸ್ಕöÈತಿ ಉಳಿದುಕೊಳ್ಳುತ್ತದೆ ಎಂದು ಹೇಳಿದರು.
ವಿಪ್ರ ಯುವ ಸಂಘದ ನೂತನ ಅನ್ನಪೂರ್ಣ ಭೋಜನಾ ಶಾಲೆ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ತು ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ, ಬ್ರಾಹ್ಮಣರನ್ನು ದೇವತ ಮನುಷ್ಯರೆಂದು ಭಾರತೀಯ ಸಂಸ್ಕöÈತಿಯಲ್ಲಿ ಕರೆಯಲಾಗುತ್ತದೆ. ದೇವರೊಂದಿಗೆ ನೇರ ಸಂಪರ್ಕದಲ್ಲಿರುವವರು ಎಂಬ ಭಾವನೆಯಿಂದ ಇವರನ್ನು ಪೂಜ್ಯನೀಯವಾಗಿ ಕಾಣಲಾಗುತ್ತದೆ. ಭಾರತ ದೇಶದ ಸಂಸ್ಕöÈತಿ, ವೇದ ಪುರಾಣಗಳು ಬ್ರಾಹ್ಮಣತ್ವದಿಂದ ಉಳಿದುಕೊಂಡಿದೆ. ಆದರೆ, ಬ್ರಾಹ್ಮಣರು ಸಣ್ಣ ಸಮುದಾಯದವರಾಗಿದ್ದು, ಹಲವು ಸಂಕಷ್ಟಕರ ಬದುಕಿನಲ್ಲಿ ಬಳಲುತ್ತಿದ್ದಾರೆ. ಇವರ ಆರ್ಥಿಕ ಚೇತರಿಕೆಗೆ ಮತ್ತು ಸಮುದಾಯದ ಅಭಿವೃದ್ದಿಗೆ ಸಮಾಜ ಪೂರಕವಾಗಿ ಸ್ಪಂದಿಸಬೇಕಾಗಿದೆ ಎಂದು ಹೇಳಿದರು. ವಿಪ್ರ ಭವನದ ಮುಂದುವರಿದ ಕಾಮಗಾರಿಗೆ 5 ಲಕ್ಷ ರೂ. ಅನುದಾನದ ಭರವಸೆಯನ್ನು ಈ ಸಂದರ್ಭ ನೀಡಿದರು.
ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಾಹ್ಮಣರ ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ದಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬ್ರಾಹ್ಮಣರು ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಮಧ್ಯಾಹ್ನದ ನಂತರ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು. ಶಾಸಕ ಎ.ಎಸ್. ಪೊನ್ನಣ್ಣ, ವಿಧಾನಸಭಾ ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೆದಿಲಾಯ, ಉಪಾಧ್ಯಕ್ಷ ಮೋಹನ್ ನಲ್ಲೂರಾಯ, ಕೋಶಾಧಿಕಾರಿ ಪವನ್ ಕಂಡಿಪಾಡಿತ್ತಾಯ ಮತ್ತು ಸುನಿತಾ ಸುದರ್ಶನ್, ಸಾವಿತ್ರಿ ಹರೀಶ್, ಗುರುರಾಜ್ ಭಟ್ ಇದ್ದರು. ಡಾ. ಮೇಘ ಅವರಿಂದ ಉಚಿತ ಆರೋಗ್ಯ ತಪಾಸಣೆ ಈ ಸಂದರ್ಭ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net