ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕ್ರಮಗಳು

ಅಪ್ಪಂಗಳದಲ್ಲಿ ಇರುವ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಏರ್ಪಡಿಸಿದ್ದ ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕೃಷಿ-ತಂತ್ರಜ್ಞಾನಗಳು ಎನ್ನುವ ವಿಷಯದ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.
ಅಪ್ಪಂಗಳದಲ್ಲಿ ಇರುವ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಏರ್ಪಡಿಸಿದ್ದ ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕೃಷಿ-ತಂತ್ರಜ್ಞಾನಗಳು ಎನ್ನುವ ವಿಷಯದ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.
Published on
ಮಡಿಕೇರಿ:
ಸಮೀಪದ ಅಪ್ಪಂಗಳದಲ್ಲಿ ಇರುವ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಅಡಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಕೋಜಿಕೋಡು ಪ್ರಾಯೋಜಿತ ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕೃಷಿ-ತಂತ್ರಜ್ಞಾನಗಳು ಎನ್ನುವ ವಿಷಯದಲ್ಲಿ ಮಂಗಳವಾರ ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಅಡಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೇರಿಯನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪರಿಚಯ ನೀಡಿದರು. ಸಂಬಾರ ಬೆಳೆಗಳ ಮೌಲ್ಯವರ್ಧನೆಯ ಮಹತ್ವವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಸಿಎಆರ್-ಐಐಎಸ್‌ಆರ್ ನಿರ್ದೇಶಕರಾದ ಡಾ. ಆರ್. ದಿನೇಶ್ ಮಾತನಾಡಿ ಹವಾಮಾನ ಬದಲಾವಣೆಯ ಹಿನ್ನೆಲೆಗಳಲ್ಲಿ ಸುಧಾರಿತ ತಳಿಗಳು ಹಾಗೂ ಸುಸ್ಥಿರ ಉತ್ಪಾದನಾ ಪದ್ಧತಿಗಳ ಮಹತ್ವ ವಿವರಿಸಿದರು.
ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ, ಅಪ್ಪಂಗಳ ಐಸಿಎಆರ್-ಐಐಎಸ್‌ಆರ್‌ನ ಹಿರಿಯ ವಿಜ್ಞಾನಿ ಡಾ. ಎಂ. ಎಸ್. ಶಿವಕುಮಾರ್ ಕಾಳುಮೆಣಸು ಮತ್ತು ಶುಂಠಿಯ ಸುಧಾರಿತ ತಳಿಗಳ ಕುರಿತು ಉಪನ್ಯಾಸ ನೀಡಿದರು. ಕಾಳುಮೆಣಸಿನ ನರ್ಸರಿ ತಂತ್ರಜ್ಞಾನಗಳ ಕುರಿತು ಡಾ. ಎಚ್. ಜೆ. ಅಕ್ಷಿತಾ ವಿವರಿಸಿದರು. ಅಪ್ಪಂಗಳ ಐಸಿಎಆರ್-ಐಐಎಸ್‌ಆರ್ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಎಸ್. ಜೆ. ಅಂಕೇಗೌಡ ಕಾಳುಮೆಣಸಿನ ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಬೆಳೆ ಉತ್ಪಾದನೆ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀನಿವಾಸನ್ ಶುಂಠಿಯ ಉತ್ಪಾದನಾ ತಂತ್ರಜ್ಞಾನಗಳ ಕುರಿತು ಮಾತನಾಡಿದರು. ಕರಿ ಮೆಣಸು ಮತ್ತು ಶುಂಠಿಯ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಡಾ. ಆರ್. ಪ್ರವೀಣ ಮಾಹಿತಿ ನೀಡಿದರು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 150 ರೈತರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೈತರ ಪ್ರಯೋಜನಕ್ಕಾಗಿ ಸಂಸ್ಥೆ ಅಭಿವೃದ್ಧಿಪಡಿಸಿದ ಸಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net