ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ರೇಖಾ ಮಾತನಾಡಿ, ಓಂಕಾರೇಶ್ವರ ದೇವಾಲಯ, ಪಾಲೂರು ಮಹಾಲಿಂಗೇಶ್ವರ ದೇವಾಲಯ, ಅರಮೇರಿ ಮಠ, ಕಿರಿಕೊಡ್ಲಿ ಮಠ, ಐನ್‌ಮನೆಗಳು, ಧವಸ ಭಂಡಾರಗಳು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಸ್ತಪ್ರತಿಗಳು ಸಿಗಬಹುದು. ಸರ್ಕಾರವು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಮೂಲಕ ಜ್ಞಾನ ಭಾರತಂ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಇತಿಹಾಸದ ಜೀವಂತ ದಾಖಲೆಗಳು, ಅಪರೂಪದ ಜ್ಞಾನ ಸಂಪತ್ತು, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ, ಸಂಶೋಧನೆಗೆ ಮೂಲವಾಗಿದೆ. ಹಳೆಯ ಭಾಷೆ ಮತ್ತು ಲಿಫಿಗಳ ಸಂರಕ್ಷಣೆ, ಭವಿಷ್ಯದ ಪೀಳಿಗೆಗೆ ಅಮೂಲ್ಯ ಕೊಡುಗೆ ಎಂದು ರೇಖಾ ವರ್ಣಿಸಿದರು.