ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡಲೇ ಚಿಕಿತ್ಸೆ ಕೊಡಬೇಕು

 ಆಕಸ್ಮಿಕ ಪಟಾಕಿ ಸಿಡಿತದಿಂದ ಬೆರಳು ಕಳೆದುಕೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಗೋಣಿಕೊಪ್ಪಲುವಿನ ಪವನ್ ಆರೋಗ್ಯವನ್ನು ಶಾಸಕ ಪೊನ್ನಣ್ಣ ವಿಚಾರಿಸಿದರು. . ಡಾ. ಲೋಕೇಶ್ ಕುಮಾರ್, ಡಾ. ಅಭಿನಂದನ್, ಅಪ್ರು ರವೀಂದ್ರ, ಸೂರಜ್ ಹೊಸೂರು, ಪ್ರಭುರೈ ಮತ್ತಿತರರು ಇದ್ದರು.
ಆಕಸ್ಮಿಕ ಪಟಾಕಿ ಸಿಡಿತದಿಂದ ಬೆರಳು ಕಳೆದುಕೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಗೋಣಿಕೊಪ್ಪಲುವಿನ ಪವನ್ ಆರೋಗ್ಯವನ್ನು ಶಾಸಕ ಪೊನ್ನಣ್ಣ ವಿಚಾರಿಸಿದರು. . ಡಾ. ಲೋಕೇಶ್ ಕುಮಾರ್, ಡಾ. ಅಭಿನಂದನ್, ಅಪ್ರು ರವೀಂದ್ರ, ಸೂರಜ್ ಹೊಸೂರು, ಪ್ರಭುರೈ ಮತ್ತಿತರರು ಇದ್ದರು.
Published on
ಮಡಿಕೇರಿ:
ಸರ್ಕಾರಿ ಆಸ್ಪತ್ರೆಗೆ ದಾಖಲಾಗುವವರಿಗೆ ತಕ್ಷಣ ಚಿಕಿತ್ಸೆ ಕೊಡಬೇಕು. ಬಿ.ಪಿ.ಎಲ್ ಅಥವಾ ಎ.ಪಿ.ಎಲ್ ನವರು ಎಂದು ನಂತರ ಮಾಹಿತಿ ಪಡೆದು ಬಿಲ್ ಬಗ್ಗೆ ನಿರ್ಧರಿಸಿ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸೂಚನೆ. ಆಕಸ್ಮಿಕ ಪಟಾಕಿ ಸಿಡಿತದಿಂದ ಬೆರಳು ಕಳೆದುಕೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಗೋಣಿಕೊಪ್ಪಲುವಿನ ಬಾಲಕ ಪವನ್ ಆರೋಗ್ಯ ವಿಚಾರಿಸಲು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಈ ಸೂಚನೆ.
ಬಡ ಕುಟುಂಬದ ಪವನ್‌ನನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ದಾಖಲಾತಿ ಇಲ್ಲದೆ ಇದ್ದುದರಿಂದ ಎಪಿಎಲ್ ಎಂದು ನಿರ್ಧರಿಸಿ ಬಿಲ್ ಕಟ್ಟಿಸಲಾಯಿತು. ನಂತರ ಶಾಲಾ ದಾಖಲಾತಿ ಸಲ್ಲಿಸಲಾಯಿತು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಶಾಸಕರ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಪೊನ್ನಣ್ಣ ತುರ್ತು ಸಂಧರ್ಭದಲ್ಲಿ ಬಡ ರೋಗಿಗಳ ಹಣವಿಲ್ಲದೆ ದಾಖಲೆಗಳೊಂದಿಗೆ ಚಿಕಿತ್ಸೆಗಾಗಿ ತರದೇ ಇದ್ದರೆ ಚಿಕಿತ್ಸೆ ಪಡೆಯಲು ವಿಳಂಬವಾಗಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಹೇಳಿದರು.
ಆಸ್ಪತ್ರೆಯ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಚಿಕಿತ್ಸೆಯಲ್ಲಿಯೂ ಗುಣಮಟ್ಟ ಇರಬೇಕು ಎಂದು ಹೇಳಿದರು. ಮೆಡಿಕಲ್ ಕಾಲೇಜು ಡೀನ್ ಡಾ. ಲೋಕೇಶ್ ಕುಮಾರ್,
ಆರ್.ಎಂ. ಡಾ. ಅಭಿನಂದನ್, ಮುಖಂಡರಾದ ಅಪ್ರು ರವೀಂದ್ರ, ಸೂರಜ್ ಹೊಸೂರು, ಪ್ರಭುರೈ ,ಪಿ.ಎಲ್.ಸುರೇಶ್, ಹನಿಫ್ ಸಂಪಾಜೆ, ವಿಕಾಸ್ ಆಯ್ಕೆರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net