ನಗರದಲ್ಲಿ ಗಾಂಜಾ ವ್ಯಸನಿಗಳು ಕಂಡುಬಂದರೆ ತಿಳಿಸಿ

ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಮತ್ತು ಪೊಲೀಸರ ನಡುವಿನ ಸಮನ್ವಯ ಸಭೆಯಲ್ಲಿ ಮಾತನಾಡುತ್ತಿರುವ ಠಾಣಾಧಿಕಾರಿ ನವೀನ್. ಆಟೋ ಚಾಲಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಮತ್ತು ಪೊಲೀಸರ ನಡುವಿನ ಸಮನ್ವಯ ಸಭೆಯಲ್ಲಿ ಮಾತನಾಡುತ್ತಿರುವ ಠಾಣಾಧಿಕಾರಿ ನವೀನ್. ಆಟೋ ಚಾಲಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಠಾಣಾಧಿಕಾರಿ ಜಿ.ನವೀನ್ ಸೂಚನೆ
  • ಸಮನ್ವಯ ಸಭೆ
ಪೊನ್ನಂಪೇಟೆ: ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮತ್ತು ಶ್ರೀ ನಂದೀಶ್ವರ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರ ಸಮನ್ವಯ ಸಭೆ ಮಂಗಳವಾರ ನಡೆಯಿತು.
ಠಾಣಾಧಿಕಾರಿ ಜಿ.ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊನ್ನಂಪೇಟೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಠಾಣಾಧಿಕಾರಿ ಮಾತನಾಡಿ, ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಂಜಾ ವ್ಯಸನಿಗಳು ಮತ್ತು ಇತರ ಅಕ್ರಮ ಚಟುವಟಿಕೆಯಲ್ಲಿ ಯಾರಾದರೂ ಭಾಗಿಯಾಗಿರುವುದು ತಿಳಿದು ಬಂದರೆ ಕೂಡಲೇ ತಮಗೆ ಮಾಹಿತಿ ನೀಡುವಂತೆ ಆಟೋ ಚಾಲಕರಿಗೆ ತಿಳಿಸಿದರು.
ಸೂಕ್ತ ದಾಖಲಾತಿಗಳನ್ನು ಇಟ್ಟುಕೊಂಡು ಆಟೋ ಚಾಲನೆ ಮಾಡಬೇಕು, ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಟ್ರಾಫಿಕ್ ನಿಯಮಗಳನ್ನು ಪಾಲಿಸದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಂದು ಹೇಳಿದರು.
ಸಭೆಯಲ್ಲಿ ಪೊನ್ನಂಪೇಟೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ದಿನೇ ದಿನೆ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಠಾಣಾಧಿಕಾರಿಯವರಿಗೆ ಮಾಲೀಕರ ಸಂಘದ ಸದಸ್ಯರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಈಗಾಗಲೇ ಇದರ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು ಶೀಘ್ರದಲ್ಲೇ ಅಂತ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನಂತರ ಪೊಲೀಸ್ ಠಾಣಾ ವತಿಯಿಂದ ಆಟೋಗಳಿಗೆ ಹೊಸದಾಗಿ ಪಿಪಿಎಸ್ ಸಂಖ್ಯೆಯನ್ನು ನೀಡಲಾಯಿತು.
ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಚಮ್ಮಟ್ಟೀರ ಶಾಂತ ಪೊನ್ನಪ್ಪ ಕಾರ್ಯದರ್ಶಿ ಬಿ.ಎಸ್ ಸುರೇಶ್, ಖಜಾಂಚಿ ಮಂಜು, ಸಂಘದ ಸದಸ್ಯರು ಹಾಗೂ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net