ಭಾನುವಾರ ಮಧ್ಯಾಹ್ನ ೨ ಗಂಟೆಗೆ ವ್ಯಾಲಿ ಪ್ಲೇ ಶಾಲೆ ಮುಂಭಾಗದಿಂದ ಚೆಟ್ಟಳ್ಳಿ ಪ್ರೌಢಶಾಲಾ ಆಟದ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ಸಾಗಲಿದೆ. ಶೋಭಾಯಾತ್ರೆಯಲ್ಲಿ ಶ್ರೀ ಮೂಕಾಂಬಿಕ ಭಜನೆ ಕುಣಿತ ತಂಡ ನೆಲ್ಯಹುದಿಕೇರಿ, ಪೂರ್ಣ ಕುಂಭ ಸ್ವಾಗತ, ಉಡತ್ಮೊಟ್ಟೆ ತಂಡದವರಿಂದ ಭಜನೆ ಕುಣಿತ, ಬೆಳ್ಳಿ ರಥದ ಮೆರವಣಿಗೆ, ಶ್ರೀ ಶಬರೀಶ ಚೆಂಡೆ ಮೇಳ ತಂಡ ಚೆಟ್ಟಳ್ಳಿ, ಹುಲಿ ವೇಷ ಪುತ್ತೂರು, ಬಾಳೆಗುಂಡಿ ತಂಡದಿಂದ ಹಾಡಿ ಕುಣಿತ ಮತ್ತು ಶ್ರೀ ಶೆಟ್ಟಿ ಆರ್ಟ್ಸ್ ಗೊಂಬೆ ಬಳಗ ಬೆಳ್ತಂಗಡಿ ಹಾಗೂ ಇತರ ಆಕರ್ಷಕ ಕಾರ್ಯಕ್ರಮ ಜರುಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.