30ರಿಂದ ಮನೆ ಮನೆ ಭೇಟಿ

ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ
ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ
Published on
ಮಡಿಕೇರಿ:
ಕೊಡಗಿನಲ್ಲೂ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬAಧ ಸಿದ್ಧತೆಗಳು ನಡೆದಿದ್ದು ಈ ಸಂಬAಧ ವೇಳಾಪಟ್ಟಿ ಪ್ರಕಟಿಸಲಾಗಿದೆ. ಯಾವುದೇ ಅರ್ಹ ಮತದಾರರನ್ನು ಕೈಬಿಡುವಂತಿಲ್ಲ ಮತ್ತು ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಂತಿಲ್ಲ ಎನ್ನುವ ಪ್ರಮುಖ ಗುರಿ ಇಟ್ಟುಕೊಂಡು ಎಸ್‌ಐಆರ್ ಮಾಡಲಾಗುತ್ತಿದೆ. ದೇಶದಲ್ಲಿ ಇಲ್ಲಿಯ ತನಕ 10 ಬಾರಿ ಎಸ್‌ಐಆರ್ ನಡೆದಿದ್ದು, 2002-04ರಲ್ಲಿ ಕೊನೆಯದಾಗಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆದಿತ್ತು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಪೂರ್ವಭಾವಿ ಕಾರ್ಯವಾಗಿ ಈಗಾಗಲೇ ಮ್ಯಾಪಿಂಗ್ ಮುಗಿದಿದೆ. 2025 ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಿ, ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿ ವಿವರಗಳನ್ನು ಜೋಡಣೆ ಮಾಡಲಾಗಿದೆ. ಈ ಕಾರ್ಯದಲ್ಲಿ ಜಿಲ್ಲೆಯಲ್ಲಿ ಶೇ.98.30 ಪ್ರಗತಿ ಸಾಧಿಸಲಾಗಿದ್ದು, ಉಳಿದ ಮತದಾರರನ್ನು ಜೋಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈ ಮ್ಯಾಪಿಂಗ್ ಆಧಾರದಲ್ಲಿ ಎಸ್‌ಐಆರ್ ನಡೆಸಲಾಗುತ್ತಿದ್ದು, ವಿಶೇಷ ಸಮಗ್ರ ಪರಿಷ್ಕರಣೆಗೆ 2026ರ ಅ.10ನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿ ಮಾಡಲಾಗಿದೆ.
ಎಸ್‌ಐಆರ್‌ಗೆ ಸಂಬAಧಿಸಿದAತೆ ಜೂ. 20ರಿಂದ ಜೂ. 29ರ ತನಕ ಪೂರ್ವತಯಾರಿ, ತರಬೇತಿ ಹಾಗೂ ಮುದ್ರಣ ಕೆಲಸ ನಡೆಸಲಾಗುತ್ತದೆ.
ಜಿಲ್ಲಾ ಚುನಾವಣಾಧಿಕಾರಿ, ಅಪರ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ, ಚುನಾವಣಾ ತಹಸೀಲ್ದಾರ್, ಮಾಸ್ಟರ್ ತರಬೇತುದಾರರು, ಮತ್ತು ಟೆಕ್ನಿಕಲ್ ಪ್ರೋಗ್ರಾಮರ್‌ಗಳಿಗೆ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಐಟಿ ಅಪ್ಲಿಕೇಶನ್ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ತರಬೇತಿ ನೀಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರಿಗೆ ತರಬೇತಿಯನ್ನು ಮತದಾರರ ನೋಂದಣಾಧಿಕಾರಿಗಳು ನೀಡಲಿದ್ದಾರೆ.
ಜೂ.30ರಿಂದ ಜು.29ರ ತನಕ ಮತಗಟ್ಟೆ ಅಧಿಕಾರಿ ಮನೆ-ಮನೆ ಭೇಟಿಗೆ ದಿನಾಂಕ ನಿಗದಿಪಡಿಸಲಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ ಆಯಾ ಭಾಗದ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರಿಗೆ ಮತದಾರರ ಪೂರ್ವ ಮುದ್ರಿತ ವಿವರಗಳಿರುವ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸುತ್ತಾರೆ. ನಮೂನೆ ಭರ್ತಿ ಮಾಡಲು ಮಾರ್ಗದರ್ಶನ ನೀಡುತ್ತಾರೆ. ಪ್ರತಿಯೊಬ್ಬ ಮತದಾರರೂ ಗಣತಿ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಮತದಾರ ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಅನ್ ಲೈನ್‌ನಲ್ಲೂ ಅಪ್‌ಲೋಡ್ ಮಾಡಬಹುದು. ಗಣತಿ ನಮೂನೆಯನ್ನು ಸಲ್ಲಿಸಲು ವಿಫಲರಾಗುವ ಮತದಾರರನ್ನು ಮತಗಟ್ಟೆವಾರು ಗೈರು, ವಲಸೆ, ಮೃತ ಅಥವಾ ನಕಲಿ ಎಂದು ಪಟ್ಟಿ ಮಾಡಲಾಗುತ್ತದೆ. ಇವರನ್ನು ಕರಡು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದಿಲ್ಲ.
ಗಣತಿ ನಮೂನೆಯಲ್ಲಿ ಒದಗಿಸಲಾದ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಗಳ ವಿವರಗಳು ಲಭ್ಯವಿಲ್ಲದಿದ್ದರೆ ಅಥವಾ ಡೇಟಾಬೇಸ್‌ಗೆ ಹೊಂದಿಕೆಯಾಗದ ಮತದಾರರಿಗೆ ನೋಟೀಸ್ ನೀಡಲಾಗುತ್ತದೆ. ನೋಟೀಸ್ ಸ್ವೀಕರಿಸಿದ ಮತದಾರರು 1987ರ ಜು.1ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ದಾಖಲೆ, 1987ರ ಜು.1 ರಿಂದ 2004ರ ಡಿ.2ರ ನಡುವೆ ಭಾರತದಲ್ಲಿ ಜನಿಸಿದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಗುರುತಿಸುವ ದಾಖಲೆಯೊಂದಿಗೆ ತಂದೆ ಅಥವಾ ತಾಯಿಗೆ ಸಂಬAಧಿಸಿದ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ದಾಖಲೆ, 2004ರ ಡಿ.2ರ ನಂತರ ಭಾರತದಲ್ಲಿ ಜನಿಸಿದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಗುರುತಿಸುವ ದಾಖಲೆ, ತಂದೆ ಅಥವಾ ತಾಯಿಗೆ ಸಂಬAಧಿಸಿದ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ದಾಖಲೆ ಪೋಷಕರು ಭಾರತೀಯರಲ್ಲದಿದ್ದರೆ ಜನನದ ಸಮಯದಲ್ಲಿ ಅವರ ಪಾಸ್‌ಪೋರ್ಟ್ ಮತ್ತು ವೀಸಾದ ಪ್ರತಿ ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ ಆದರೆ ಪೌರತ್ವ, ವಿಳಾಸ ಅಥವಾ ಜನ್ಮ ದಿನಾಂಕದ ಪುರಾವೆ ಆಗಿರುವುದಿಲ್ಲ ಎನ್ನುವುದು ಗಮನಾರ್ಹ.
ಜು. 29ರಂದು ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ನಡೆಸಲಾಗುತ್ತದೆ. ಮತದಾನ ಸುಗಮವಾಗಿ ನಡೆಸುವುದಕ್ಕಾಗಿ 1200ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಯನ್ನು ಪುನರ್ ವಿಂಗಡಣೆ ಮಾಡಲು ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಕುಟುಂಬದ ಎಲ್ಲಾ ಮತದಾರರು ಒಂದೇ ವಿಭಾಗದಲ್ಲಿ ಮತ್ತು ಒಂದೇ ಭಾಗದಲ್ಲಿ ಇರುವಂತೆ ಮಾಡಲಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಒಂದು ಬೀದಿಯಲ್ಲಿ ವಾಸಿಸುವ ಮತದಾರರನ್ನು ಒಂದೇ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗುತ್ತದೆ.
ಗಣತಿ ನಮೂನೆಗಳನ್ನು ಸ್ವೀಕರಿಸಿದ ಎಲ್ಲಾ ಮತದಾರರನ್ನು ಸೇರ್ಪಡೆಗೊಳಿಸುವ ಮೂಲಕ ಆ. 5ರಂದು ಮತದಾರರ ನೋಂದಣಾಧಿಕಾರಿ ಕರಡು ಮತದಾರರ ಪಟ್ಟಿ ಸಿದ್ಧಪಡಿಸುತ್ತಾರೆ. ಮತದಾರರು ನಿಗದಿತ ಸಮಯದೊಳಗೆ ತಮ್ಮ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದಲ್ಲಿಅವರು ಕ್ಷೇಮು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಸೇರ್ಪಡೆಗೊಳಿಸುವುದಕ್ಕಾಗಿ ನಿಗದಿತ ಘೋಷಣೆ ನಮೂನೆ ಸಲ್ಲಿಸಬಹುದಾಗಿರುತ್ತದೆ.
ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಆ.5ರಿಂದ ಸೆ. 4ರ ತನಕ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗೆ ಸಲ್ಲಿಸಬಹುದು. ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಆರ್ಹತೆಯ ಬಗ್ಗೆ ಸಂದೇಹ ಬಂದಲ್ಲಿ ಸ್ವಯಂಪ್ರೇರಿತ ವಿಚಾರಣೆ ಪ್ರಾರಂಭಿಸಿ ಅಂತಹ ಮತದಾರರನ್ನು ಯಾಕೆ ಮತದಾರರ ಪಟ್ಟಿಯಿಂದ ತೆಗೆಯಬಾರದು ಎಂಬ ಬಗ್ಗೆ ನೋಟಿಸ್ ಕೊಡುತ್ತಾರೆ. ಮತದಾರರ ನೋಂದಣಾಧಿಕಾರಿಯ ಯಾವುದೇ ನಿರ್ಣಯದ ಮೇಲಿನ ಮೇಲ್ಮನವಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬಹುದಾಗಿದೆ. ಎರಡನೇ ಮೇಲ್ಮನವಿಯನ್ನು ಮುಖ್ಯ ಚುನಾವಣಾಧಿಕಾರಿಯವರಿಗೂ ಸಲ್ಲಿಸಬಹುದಾಗಿದೆ.
ಅ.10ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ವೆಬ್‌ಸೈಟ್‌ನಲ್ಲೂ ಅಪ್ ಲೋಡ್ ಮಾಡಲಾಗುತ್ತದೆ. ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಹಿನ್ನೆಲೆಯಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡುವುದು ಕಡ್ಡಾಯವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಈಗಾಗಲೇ ಪಟ್ಟಿ ಸಲ್ಲಿಸಲಾಗಿದೆ.
"

ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ರಾಜ್ಯದಲ್ಲಿ ಕೊನೆಯದಾಗಿ 2002ನೇ ಸಾಲಿನಲ್ಲಿ ನಡೆಸಲಾಗಿದೆ. ಈ ಬಾರಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅರ್ಹತಾ ದಿನಾಂಕವಾಗಿ 2026ರ ಅ.1 ನಿಗದಿಪಡಿಸಲಾಗಿದೆ. ಜೂ. 20ರಿಂದ ಎಸ್‌ಐಆರ್‌ನ ಪ್ರಕ್ರಿಯೆಗಳು ಶುರುವಾಗುತ್ತದೆ. ಅ.7ಕ್ಕೆ ಅಂತಿಮ ಮತದಾರರ ಕರಡು ಪಟ್ಟಿ ಪ್ರಕಟವಾಗಲಿದೆ. ಮತಗಟ್ಟೆ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು, ಮತಗಟ್ಟೆ ಅಧಿಕಾರಿಗಳ ಕಾರ್ಯ ಪರಿವೀಕ್ಷಿಸಲು, ನ್ಯೂನತೆ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಅನುಕೂಲವಾಗುವಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡುವುದು ಕಡ್ಡಾಯವಾಗಿದೆ.

— ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net