ವಿಧವೆಯ ಕುಟುಂಬಕ್ಕೆ ಮನೆ ಹಸ್ತಾಂತರ

ಪಿ.ಕೆ.ಸನ್ನಿ ಅವರ ಪತ್ನಿ ಮಂಜುಳಾ ಕುಟುಂಬಕ್ಕೆ ಬಿ.ಎಂ.ಗಣೇಶ್ ಅವರು ಮನೆಯ ಕೀ ಹಸ್ತಾಂತರಿಸಿದರು. ಗ್ರಾಮಸ್ಥರು, ಕುಟುಂಬಸ್ಥರು ಹಾಜರಿದ್ದರು.
ಪಿ.ಕೆ.ಸನ್ನಿ ಅವರ ಪತ್ನಿ ಮಂಜುಳಾ ಕುಟುಂಬಕ್ಕೆ ಬಿ.ಎಂ.ಗಣೇಶ್ ಅವರು ಮನೆಯ ಕೀ ಹಸ್ತಾಂತರಿಸಿದರು. ಗ್ರಾಮಸ್ಥರು, ಕುಟುಂಬಸ್ಥರು ಹಾಜರಿದ್ದರು.
Published on
ವಿರಾಜಪೇಟೆ: ವಿರಾಜಪೇಟೆ ವಿದ್ಯುತ್ ಗುತ್ತಿಗೆದಾರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್ ಅವರು ವಿಧವಾ ಮಹಿಳೆಯ ಕುಟುಂಬಕ್ಕೆ ಸ್ವಂತ ಖರ್ಚಿನಲ್ಲಿ ಮನೆಯೊಂದು ನಿರ್ಮಾಣ ಮಾಡಿ ಬುಧವಾರ ಹಸ್ತಾಂತರ ಮಾಡಿದರು.
ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಿಮಕ್ಕಿ ಗ್ರಾಮದ ಪಾಲೆಪಾರೆ (ಹೂಕಾಡ್ ಪೈಸಾರಿ) ಸರ್ವೇ ಸಂಖ್ಯೆ 236/1ರಲ್ಲಿ ವಾಸವಿದ್ದ ದಿವಂಗತ ಪಿ.ಕೆ.ಸನ್ನಿ ಅವರ ಪತ್ನಿ ಮಂಜುಳಾ ಮತ್ತು ಅವರ ಮೂವರು ಮಕ್ಕಳ ಕುಟುಂಬಕ್ಕೆ ನೂತನ ಮನೆ ನಿರ್ಮಾಣ ಮಾಡಿ ಬುಧವಾರ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಬಿ.ಎಂ.ಗಣೇಶ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶಕ್ಕೆ ಚಾಲನೆ ನೀಡಿದರು.
ಬಿ.ಎಂ.ಗಣೇಶ್ ಅವರು ಬಡ ಕುಟುಂಬಗಳನ್ನು ಗುರುತಿಸಿ ಸತತ ಐದು ವರ್ಷಗಳಿಂದ ತನ್ನ ಗಳಿಕೆಯ ಒಂದು ಭಾಗವನ್ನು ಗುಡಿಸಲು ಮನೆಯಲ್ಲಿ ಜೀವನ ಸಾಗಿಸುತಿದ್ದ ಕುಟುಂಬಗಳಿಗೆ ಆಸರೆಯಾಗುವಂತೆ ನೂತನ ಮನೆ ನಿರ್ಮಾಣ ಮಾಡಿ ನೀಡುತ್ತಾ ಬರುತಿದ್ದಾರೆ. ಗಣೇಶ್ ಅವರು ಮೊದಲು ಕ್ರಮವಾಗಿ ಪೆರುಂಬಾಡಿ ಗ್ರಾಮದ ಎರವರ ಕಾಳ, ಕೆದಮೂಳ್ಳೂರು ಗ್ರಾಮ ತರ್ಮೆ ಮೊಟ್ಟೆ ಕಮಲ ಎಂಬುವರಿಗೆ, ಪೆರುಂಬಾಡಿ ಗ್ರಾಮದ ತರ್ಮೆ ಕಾಡು ಪೈಸಾರಿಯ ಎರವರ ಶಂಕರ ಕುಟುಂಬಕ್ಕೆ, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಂಡಿಮಕ್ಕಿ ಗ್ರಾಮದ ಪಾಲೆಪಾರೆ (ಹೂಕಾಡ್ ಪೈಸಾರಿ) ಪಿ.ಎಸ್.ಕಿಶನ್ ದಂಪತಿಗೆ, ಐದನೆಯ ಮನೆ ದಿವಂಗತ ಪಿ.ಕೆ.ಸನ್ನಿ ಅವರ ಪತ್ನಿ ಮಂಜುಳಾ ಮತ್ತು ಅವರ ಮೂವರು ಮಕ್ಕಳ ಕುಟುಂಬಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು.
ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಆರ್ಜಿ ಪೆರುಂಬಾಡಿ ಅಧ್ಯಕ್ಷ ಬಿ.ಎಂ.ರಮೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಡಿ.ನವೀನ್ ಹಾಗೂ ಮನೆ ಪಡೆದುಕೊಂಡ ಕುಟುಂಬದ ವತಿಯಿಂದ ಗಣೇಶ್ ಅವರನ್ನು ಸನ್ಮಾನಿಸಲಾಯಿತು.
ಬಿ.ಎಂ. ಗಣೇಶ್ ಅವರ ಪತ್ನಿ ಸುಮಾ, ತಂದೆ ಬಿ.ಆರ್.ಮಂಜಪ್ಪ, ತಾಯಿ ಪಾರ್ವತಿ, ತಮ್ಮ ರಮೇಶ್, ಉದ್ಯಮಿ ಬಿ.ಆರ್. ನಾಗರಾಜ್ (ಚುಪ್ಪ) ಸೇರಿದಂತೆ, ಕಂಡಿಮಕ್ಕಿ ತ್ರಿಮೂರ್ತಿ ಅರ್ಚಕರಾದ ಪಿ.ಕೆ.ಮಧು, ಗ್ರಾಮಸ್ಥರು, ಸ್ನೇಹಿತರು ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net