ಹೊಸತೋಟ-ಗರಗಂದೂರು ರಸ್ತೆ ಮರು ಡಾಂಬರು ಪೂರ್ಣ

ಸೋಮವಾರಪೇಟೆ ತಾಲೂಕಿನ ಹೊಸತೋಟ-ಗರಗಂದೂರು ರಸ್ತೆ ಮರು ಡಾಂಬರೀಕರಣವಾಗಿರುವುದು.
ಸೋಮವಾರಪೇಟೆ ತಾಲೂಕಿನ ಹೊಸತೋಟ-ಗರಗಂದೂರು ರಸ್ತೆ ಮರು ಡಾಂಬರೀಕರಣವಾಗಿರುವುದು.
Published on
ಸೋಮವಾರಪೇಟೆ: ಹೊಸತೋಟ-ಗರಗಂದೂರು ರಸ್ತೆ ಮರು ಡಾಂಬರೀಕರಣ ಕಾಮಗಾರಿ ಇದೀಗ ಪೂರ್ಣವಾಗಿದೆ.
ಮರು ಡಾಂಬರೀಕರಣ ಕಾಮಗಾರಿ ಕಳಪೆ ಆರೋಪ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಸ್ಥಳೀಯರು ತಡೆಯೊಡಿದ್ದ ಪರಿಣಾಮ ಸ್ಥಗಿತಗೊಂಡಿತ್ತು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2025ರ ಮೇ ತಿಂಗಳಲ್ಲಿ ಮರುಡಾಂಬರೀಕರಣ ಮಾಡಲು ಗುತ್ತಿಗೆದಾರ ಮುಂದಾಗಿದ್ದರು. ಈ ಸಂದರ್ಭ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಸ್ಥಳಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರಲ್ಲದೆ, ಮಳೆ ನಿಂತ ನಂತರ ಮರು ಡಾಂಬರು ಹಾಕುವಂತೆ ಸೂಚಿಸಿದ್ದರು. ಅದರಂತೆ ಇದೀಗ ಮರು ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net