ಸಾಧಕ ಮಕ್ಕಳ ಪಾಲಕರಿಗೆ ಸನ್ಮಾನ

ನಾಪೋಕ್ಲು ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಸಾಧಕ ಮಕ್ಕಳ ಪಾಲಕರನ್ನು ಸನ್ಮಾನಿಸಲಾಯಿತು. ಆಬಿದ್, ಹಂಸ ಕೊಟ್ಟ ಮುಡಿ, ಅರೆಯಡ ರತ್ನಾ ಪೆಮ್ಮಯ್ಯ, ಕೆ.ಎ. ಇಸ್ಮಾಯಿಲ್ ಇದ್ದರು.
ನಾಪೋಕ್ಲು ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಸಾಧಕ ಮಕ್ಕಳ ಪಾಲಕರನ್ನು ಸನ್ಮಾನಿಸಲಾಯಿತು. ಆಬಿದ್, ಹಂಸ ಕೊಟ್ಟ ಮುಡಿ, ಅರೆಯಡ ರತ್ನಾ ಪೆಮ್ಮಯ್ಯ, ಕೆ.ಎ. ಇಸ್ಮಾಯಿಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮ
ನಾಪೋಕ್ಲು: ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಾಲಕರನ್ನು ಕೆೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ವೈದ್ಯಕೀಯ ಶಿಕ್ಷಣದಲ್ಲಿ ಸರ್ಕಾರಿ ಸೀಟು ಪಡೆದ ವಿದ್ಯಾರ್ಥಿಗಳಾದ ಎಂ.ಎಂ.ಶಮಾ ಅವರ ಪಾಲಕರಾದ ಡೆಕ್ಕನ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ವಕ್ತಾರ ಎಂ.ಎ.ಮನ್ಸೂರ್ ಆಲಿ ಹಾಗೂ ಹಫೀಯ ಫಾತಿಮಾ ಪಾಲಕರಾದ ಹುಸೇನ್ ಮತ್ತು ಕೊರೋನಾ ಅವಧಿ ಸೇರಿದಂತೆ ನಿರಂತರ ಸಮಾಜ ಸೇವೆ ಮಾಡುತ್ತಿರುವ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿಯ ಇಂದಿರಾನಗರದ ನಿವಾಸಿ ಪಿ.ಜಿ ಸುಬ್ರಮಣಿ ಅವರನ್ನು ಸನ್ಮಾನಿಸಲಾಯಿತು.
ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅಧ್ಯಕ್ಷತೆ ವಹಿಸಿದ್ದರು. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟ ಮುಡಿ, ವಿಎಸ್‌ಎಸ್‌ಎನ್ ನಿರ್ದೇಶಕಿ ಅರೆಯಡ ರತ್ನಾ ಪೆಮ್ಮಯ್ಯ, ನಾಪೋಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಎ. ಇಸ್ಮಾಯಿಲ್, ಪಿ.ಎಂ.ಯುನಸ್, ಪಿ.ಎಂ.ರಶೀದ್, ಅರಫತ್, ಸಿರಾಜುದ್ದೀನ್ ಚೆರಿಯಪರಂಬು, ಆದಿಲ್, ಸಿ.ಎಚ್. ಅಹ್ಮದ್, ಹಾರೀಸ್, ಆಸ್ಕರ್, ಆಸಿಫ್, ಪಿ.ಎಂ. ರಶೀದ್, ಮೊಹಮ್ಮದ್ ಅಲಿ, ಸಿ ಎಚ್.ಅಹಮದ್, ಉಪಾಧ್ಯಕ್ಷ ಸಂಶು ಕಾರೆಕ್ಕಾಡ್, ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು, ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net